ಬೆಳಗಾವಿಯ ಕ್ಲಬ್ ರೋಡ್‍ನಲ್ಲಿ ರಸ್ತೆ ದಾಟುವಾಗ ಜಸ್ಟ್ ಮಿಸ್ ಆಗಿದ್ದ ಚಿರತೆ ಇಂದು ಬೆಳಗಿನ ಜಾವ ಮತ್ತೆ ಎಸ್ಕೇಪ್ ಆಗಿದ್ದು, ಕೆರೆಗೆ ನೀರು ಕುಡಿಯಲು ಬಂದಿದ್ದ ವೇಳೆ ಪರಾರಿಯಾಗಿದೆ
ಹೌದು ಕಳೆದ 23 ದಿನಗಳಿಂದ ಕುಂದಾನಗರಿ ಬೆಳಗಾವಿಯಲ್ಲಿ ಭೀತಿ ಹುಟ್ಟಿಸಿರುವ ಚಿರತೆ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆಗೆ ಚೆಲ್ಲಾಟ ಆಡುತ್ತಿದೆ.
ಇಂದು ಬೆಳಗಿನ ಜಾವ ಹಿಂಡಲಗಾ ಗಣಪತಿ ಮಂದಿರದ ಪಕ್ಕದಲ್ಲಿರುವ ಕೆರೆಗೆ ನೀರು ಕುಡಿಯಲು ಬಂದಿತ್ತು. ಈ ವೇಳೆ ಅರಣ್ಯ ಇಲಾಖೆಯ ತಂಡ ಅಲ್ಲಿಗೆ ಧಾವಿಸುವಷ್ಟರಲ್ಲಿ ಚಿರತೆ ಮತ್ತೆ ತಪ್ಪಿಸಿಕೊಂಡು ಹೋಗಿದೆ.ಇನ್ನು ಅರಣ್ಯ ಇಲಾಖೆ ಚಿರತೆ ಹಿಡಿಯಲು ನಿನ್ನೆ ಹನಿಟ್ರ್ಯಾಪ್‍ಗೆ ಮುಂದಾಗಿತ್ತು. ಆದರೆ ಅದು ಕೂಡ ವಿಫಲವಾಗಿದೆ ಎಂಬ ಅನುಮಾನ ಮೂಡುತ್ತಿದೆ.