Breaking News

ಚಿಕ್ಕೋಡಿ-ಸದಲಗಾ ಕ್ಷೇತ್ರದಿಂದ ಪವನ ರಮೇಶ ಕತ್ತಿ ಸ್ಪರ್ಧೆ?

Spread the love

ಚಿಕ್ಕೋಡಿ: ಬಿಜೆಪಿ ಪಕ್ಷದ ವರಿಷ್ಟರು. ನಮ್ಮ ಮನೆತನದ ಹಿರಿಯರು ಮತ್ತು ಸಚಿವರಾದ ಉಮೇಶ ಕತ್ತಿ ಮತ್ತು ನಮ್ಮ ತಂದೆಯವರಾದ ರಮೇಶ ಕತ್ತಿ ಒಪ್ಪಿಗೆ ನೀಡಿದರೆ ಚಿಕ್ಕೋಡಿ-ಸದಲಗಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಉತ್ಸುಕತೆ ಇದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪವನ ರಮೇಶ ಕತ್ತಿ ಹೇಳಿದರು.

 

ಚಿಕ್ಕೋಡಿ ತಾಲೂಕಿನ ಕಬ್ಬೂರ ಪಟ್ಟಣದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಅವರು ಮಾತನಾಡಿ, ಎಲ್ಲಾ ಕಡೆ ನಮ್ಮ ಅಭಿಮಾನಿಗಳು ಇದ್ದಾರೆ. ಅವರೆಲ್ಲ ಸ್ಪರ್ಧೆ ಮಾಡಬೇಕೆಂದು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ ಇಲ್ಲಿಯವರಿಗೆ ನನ್ನ ಗಮನಕ್ಕೆ ಬಂದಿಲ್ಲ ಎಂದರು.

ನನಗೂ ಶಾಸಕರಾಗಬೇಕು ಎನ್ನುವ ಅಭಿಲಾಷೆ ಇದೆ. ಆದರೆ ನಮ್ಮ ಮನೆತನದ ಹಿರಿಯರಾದ ನಮ್ಮ ದೊಡ್ಡಪ್ಪ ಸಚಿವ ಉಮೇಶ ಕತ್ತಿ, ನಮ್ಮ ತಂದೆಯವರಾದ ರಮೇಶ ಕತ್ತಿ ಒಪ್ಪಿಗೆ ಸೂಚಿಸಿದ ಮೇಲೆ ಸ್ಪರ್ಧೆ ಮಾಡುವ ಕುರಿತು ವಿಚಾರ ಮಾಡಬಹುದು. ಸದ್ಯಕ್ಕೆ ಅಂತಹ ವಿಚಾರ ಇಲ್ಲ ಎಂದರು.

ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ ಮಾಡಬೇಕು ಎನ್ನುವುದು ಬಿಜೆಪಿ ಪಕ್ಷದ ಹಿರಿಯ ಮುಖಂಡರಾದ ಸಚಿವ ಉಮೇಶ ಕತ್ತಿ, ಲಕ್ಷ್ಮಣ ಸವದಿ, ರಮೇಶ ಕತ್ತಿ, ಡಾ.ಪ್ರಭಾಕರ ಕೋರೆ ಇವರೆಲ್ಲ ಸೇರಿ ಚರ್ಚೆ ಮಾಡಿದ ಬಳಿಕ ಚುನಾವಣೆಗೆ ಸ್ಪರ್ಧೆ ಮಾಡುವ ವಿಚಾರ ಮಾಡಲಾಗುತ್ತದೆ ಎಂದರು.

 


Spread the love

About Laxminews 24x7

Check Also

ಗಡಿ ವಿವಾದದಿಂದಾಗಿ ಮತ್ತೆ ಮಹಾರಾಷ್ಟ್ರ ಅಲರ್ಟ್

Spread the loveಬೆಳಗಾವಿ : ಗಡಿ ಸಚಿವರಾಗಿ ಹೆಚ್. ಕೆ. ಪಾಟೀಲ್ ಅವರನ್ನು ಕರ್ನಾಟಕ ಸರ್ಕಾರ ನೇಮಿಸುತ್ತಿದ್ದಂತೆ ಮಹಾರಾಷ್ಟ್ರ ಸರ್ಕಾರ ಮತ್ತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ