(ರಾಯಚೂರು ಜಿಲ್ಲೆ): ಕೂಲಿ ಅರಸಿ, ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಆ ಎರಡು ಕುಟುಂಬಗಳು ಬೆಂಗಳೂರಿಗೆ ಹೊರಟ್ಟಿದ್ದವು. ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಬಳಿ ನಡೆದ ಅಪಘಾತದಲ್ಲಿ ಕುಟುಂಬದ ಕನಸು ನುಚ್ಚುನೂರಾಯಿತು
ತಾಲ್ಲೂಕಿನ ಕುರುಕುಂದಾ ಗ್ರಾಮದ ಒಂದೇ ಕುಟುಂಬದ ನಾಲ್ವರು ಮತ್ತು ವಡವಟ್ಟಿ ಗ್ರಾಮದ ಒಂದೇ ಕುಟುಂಬದ ಮೂವರು ಮೃತರಲ್ಲಿ ಸೇರಿದ್ದಾರೆ.
ಇಬ್ಬರು ವಾಹನ ಚಾಲಕರು ಇದ್ದಾರೆ.
ಕುರುಕುಂದಾ ಗ್ರಾಮದ ಕ್ರೂಸರ್ ವಾಹನ ಚಾಲಕ ಸಿದ್ದಯ್ಯಸ್ವಾಮಿ ವಾರಕ್ಕೆರಡು ಸಲ ಕೂಲಿಕಾರರನ್ನು ಬೆಂಗಳೂರಿಗೆ ಕರೆದೊಯ್ಯುತ್ತಿದ್ದ. ಯಾದಗಿರಿ ಜಿಲ್ಲೆ ಹತ್ತಿಗುಡೂರಿನಿಂದ ಬಂದಿದ್ದ ಅಕ್ಕ ಸುಜಾತಾ, ಭಾವ ಪ್ರಭುಸ್ವಾಮಿ ಮತ್ತು ದಂಪತಿ ಪುತ್ರ ವಿನೋದ್ ಕೂಡಾ ಹೊರಟಿದ್ದರು. ದಂಪತಿ, ಮಗು ಜೊತೆಗೆ ಸಿದ್ದಯ್ಯಸ್ವಾಮಿ ಕೂಡಾ ಮೃತಪಟ್ಟಿದ್ದಾರೆ.
ಒಬ್ಬ ಬಾಲಕ ಸುರಕ್ಷಿತವಾಗಿದ್ದಾನೆ. ಕೂಲಿ ಮಾಡಿ, ಸಾಲ ತೀರಿಸಲು ಕುಟುಂಬ ಸದಸ್ಯರ ಜೊತೆ ಸುಜಾತಾ ಕೂಡಾ ಹೊರಟಿದ್ದರು.
ವಡವಟ್ಟಿ ಗ್ರಾಮದ ಕ್ರೂಸರ್ ವಾಹನ ಚಾಲಕ ಕೃಷ್ಣ, ಅವರ ಅಕ್ಕ ಲಿಂಗಮ್ಮ ಮತ್ತು ಆಕೆಯ ಪುತ್ರಿ ಐಶ್ವರ್ಯಾ ಮೃತಪಟ್ಟಿದ್ದಾರೆ. ನಾಗರಪಂಚಮಿಗೆ ತವರಿಗೆ ಮನೆಗೆ ಬಂದಿದ್ದ ಲಿಂಗಮ್ಮ ಸಹೋದರ ಮತ್ತು ಪುತ್ರಿಯ ಜೊತೆ ಬೆಂಗಳೂರಿಗೆ ಹೊರಟಿದ್ದರು. ನವಲುಕಲ್ಲ ಗ್ರಾಮದ ಆದೆಪ್ಪ ಸಹ ಮೃತಪಟ್ಟಿದ್ದಾರೆ. ಆಪ್ತರನ್ನು ಕಳೆದುಕೊಂಡ ನೋವು ಕುಟುಂಬ ಸದಸ್ಯರಲ್ಲಿ ಮಡುಗಟ್ಟಿದೆ.
ತಬ್ಬಲಿಯಾದ ಬಾಲಕ