Breaking News

ಕೊಡವರ ಪರ ಜಗ್ಗೇಶ ಹೇಳಿಕೆಗೆ ಯತ್ನಾಳ್ ಸಮರ್ಥನೆ

Spread the love

ವಿಜಯಪುರ: ಕೊಡಗಿನಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ಅವಕಾಶ ನೀಡಿದರೆ ಹೆಣ ಉರುಳುತ್ತವೆ ಎಂದಿರುವ ಸಂಸದ ಜಗ್ಗೇಶ ಹೇಳಿಕೆಯನ್ನು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕೆ ಸಮರ್ಥಿಸಿದ್ದಾರೆ. ಮಾಧ್ಯಮಗಳ ಮಟ್ಟಿಗೆ ಅದು ವಿವಾದಾತ್ಮಕ ಇರಬಹುದು, ಆದರೆ ವಾಸ್ತವ ಹಾಗಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದರು.

 

ಬುಧವಾರ ನಗರದಲ್ಲಿ ವಿಜಯಪುರ ನಗರದ ಗಾಂಧಿಚೌಕ್ ಬಳಿ ಪಾಲಿಕೆಯ ವಲಯ ಕಚೇರಿಗೆ ಚಾಲನೆ ನೀಡಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಕಾಲದಲ್ಲಿ ಲಕ್ಷಾಂತರ ಕೊಡವರ ಮಾರಣಹೋಮವಾಗಿದೆ. ಕೊಡಗಿನಲ್ಲಿ ಸಂಧಾನಕ್ಕೆ ಕರೆದ ಟಿಪ್ಪು ಸುಲ್ತಾನ್ ಮೋಸ ಮಾಡಿ, ಕೊಡವರನ್ನು ಹತ್ಯೆ ಮಾಡಿದ ಕರಾಳ ಚರಿತ್ರೆ ಇದೆ. ಹೀಗಾಗಿ ಕೊಡಗಿನ ಜನರಲ್ಲಿ ಟಿಪ್ಪು ಬಗ್ಗೆ ಸಿಟ್ಟು ಮನೆ ಮಾಡಿದೆ ಎಂದರು.

ಜನರಲ್ ಕಾರ್ಯಪ್ಪನಂಥ ಶ್ರೇಷ್ಠಾ ಸೇನಾ ದಂಧನಾಯಕರನ್ನು ಕೊಟ್ಟಿದ್ದು ಕೊಡಗು ಜಿಲ್ಲೆ. ಕೊಡಗಿನ ಜಿಲ್ಲೆಯ ಜನರಿಗೆ ನೋವಾಗಿದ್ದನ್ನು ನಾವು ಗೌರವಿಸಬೇಕು. ಅದರಂತೆ ನಾವೆಲ್ಲಾ ನಡೆಯಬೇಕು ಎಂದು ಮನವಿ ಮಾಡಿದರು.

ಮಾಜಿ ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದ ವಿಚಾರ ಕೊಡಗು ಚಲೋ ಬದಲಾಗಿ ರಾಜಧಾನಿಯಲ್ಲಿ ಕೈ ಹೋರಾಟಕ್ಕೆ ಇಳಿದಿದೆ. ಪ್ರಜಾತಂತ್ರದಲ್ಲಿ ಎಲ್ಲರಿಗೂ ಹೋರಾಟ ಮಾಡುವ ಆಧಿಕಾರವಿದೆ, ಹೋರಾಟ ಮಾಡಲಿ

ಸಿದ್ದರಾಮಯ್ಯ ನಮ್ಮ ರಾಜ್ಯದ ಹಿರಿಯ ನಾಯಕರು, ಒಂದು ಕೋಮಿನ ಪರವಾಗಿ ಓಲೈಕೆ ರೀತಿಯಲ್ಲಿ ಅವರು ಮಾತನಾಡುವುದು ಸರಿಯಲ್ಲ. ಹಿಂದೂ, ಮುಸ್ಲೀಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲ ಧರ್ಮಿಯರೂ ನಿಮಗೆ ಮತ ಹಾಕಿದ್ದಾರೆ. ಹೀಗಾಗಿ ಯಾವುದೇ ಸಮುದಾಯಕ್ಕೆ ನೋವಾಗುವಂತೆ ಮಾತನಾಡಬೇಡವುದು ಸರಿಯಲ್ಲ ಎಂದರು.

ಸಿದ್ದರಾಮಯ್ಯ ಅವರ ಬಗ್ಗೆ ನಮಗೆ ಗೌರವವಿದೆ, ನಮ್ಮ ಬಗ್ಗೆಯೂ ಅವರಿಗೆ ಅಭಿಮಾನವಿದೆ ಮುಂದೆ ಯಾರನ್ನು ಸಿಎಂ ಮಾಡಬೇಕೆಂಬುದು ಜನರ ಕೈಯ್ಯಲ್ಲಿದೆ. ಸಿದ್ಧರಾಮಯ್ಯ ಹಾಗೂ ನನ್ನ ಕೈಯಲ್ಲಿ ಮಾತ್ರವಲ್ಲ ಯಾವ ರಾಜಕೀಯ ನಾಯಕನ ಕೈಯಲ್ಲಿ ಏನೂ ಇಲ್ಲ. ಎಲ್ಲವೂ ಮತದಾರರ ಕೈಯಲ್ಲಿದೆ ಎಂದರು.

ತಾಜ್ ಬಾವಡಿಯಲ್ಲಿ ಯಾವುದೇ ಕಾರಣಕ್ಕೂ ಗಣೇಶನ ಮೂರ್ತಿಗಳನ್ನು ವಿಸರ್ಜನೆ ಮಾಡಲು ಬಿಡುವುದಿಲ್ಲ. ಒಂದೊಮ್ಮೆ ಯಾರಾದರೂ ತಾಜ್ ಬಾವಡಿಯಲ್ಲಿ ಗಣೇಶ ಮೂರ್ತಿ ವಿಸರ್ಜಿಸಿದರೆ ಅವರ ವಿರುದ್ದ ಗೂಂಡಾ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳುವುದಾಗಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಎಚ್ಚರಿಸಿದ್ದಾರೆ.

ಉದ್ಧಟತನದ ಗೂಂಡಾಗಿರಿ ವಿಜಯಪುರ ನಗರದಲ್ಲಿ ನಡೆಯಲು ಸಾಧ್ಯವಿಲ್ಲ. ಈಗಾಗಲೇ ಒಂದಿಬ್ಬರು ಗೂಂಡಾ ಕಾಯ್ದೆಯಡಿ ಜೈಲಿಗೆ ಹೋಗಿದ್ದು, ಇನ್ನೊಂದಷ್ಟು ಜನ ಹೋಗಲಿದ್ದಾರೆ ಎಂದರು.

ವಿಧಾನಸಭೆ ಚುನವಣೆಯಲ್ಲಿ ನಗರದಿಂದ ಸ್ಪರ್ಧೆ ಮಾಡುವುದಾಗಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಆಕಾಂಕ್ಷೆ ವ್ಯಕ್ತಪಡಿಸಿದ್ದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ಪರೋಕ್ಷವಾಗಿ ಅತ್ಯಂತ ಹಗುರ ಪದ ಬಳಸಿ ನಿಂದಿಸಿದರು.


Spread the love

About Laxminews 24x7

Check Also

ಕರ್ನಾಟಕದಲ್ಲಿ 2305 ಕಿ.ಮೀ.ಹೈವೇ ಯೋಜನೆಗಳು ಅನುಷ್ಠಾನ ಹಂತದಲ್ಲಿವೆ: ನಿತಿನ್ ಗಡ್ಕರಿ

Spread the loveನವದೆಹಲಿ, (ಆಗಸ್ಟ್ 20): ಕರ್ನಾಟಕ ರಾಜ್ಯದಲ್ಲಿ ಸುಮಾರು 48,428 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಸುಮಾರು 2,305 ಕಿಲೋ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ