Breaking News
Home / ರಾಜಕೀಯ / 24 ಗಂಟೆಯಲ್ಲಿಯೇ ಅನುಕಂಪ ಆಧಾರದ ನೌಕರಿ; ಮಾನವೀಯತೆ ಮೆರೆದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ

24 ಗಂಟೆಯಲ್ಲಿಯೇ ಅನುಕಂಪ ಆಧಾರದ ನೌಕರಿ; ಮಾನವೀಯತೆ ಮೆರೆದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ

Spread the love

ಬೆಳಗಾವಿ : ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ‌ಪ್ರಥಮ ದರ್ಜೆ ಸಹಾಯಕರೊಬ್ಬರು ಸೇವೆಯಲ್ಲಿರುವಾಗಲೇ ನಿಧನ ಹೊಂದಿದ್ದರಿಂದ ಅವರ ಅವಲಂಬಿತ ಕಿರಿಯ ಸಹೋದರನಿಗೆ ಕೇವಲ 24 ಗಂಟೆಯಲ್ಲಿ ಅನುಕಂಪ ಆಧಾರಿತ ನೇರ ನೇಮಕಾತಿ ಆದೇಶ ನೀಡುವ ಮೂಲಕ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕಳಕಳಿಯನ್ನು ಮೆರೆದಿದ್ದಾರೆ.
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸಚಿನ್ ಮಹಾದೇವ ಬಾದುಲೆ ಅವರು ದಿನಾಂಕ ಆಗಸ್ಟ್ 22 ರಂದು ಅನಾರೋಗ್ಯದಿಂದ ನಿಧನ ಹೊಂದಿದ್ದರು.
ತಮ್ಮ ಸಹೋದರ ಸೇವೆಯಲ್ಲಿರುವಾಗ ನಿಧನ ಹೊಂದಿರುವುದರಿಂದ ಕುಟುಂಬ ನಿರ್ವಹಣೆಗಾಗಿ ತಮಗೆ ಅನುಕಂಪ ಆಧಾರದ ಮೇಲೆ ನೌಕರಿ ನೀಡಬೇಕು ಎಂದು ಬಸವರಾಜ‌‌‌ ಮಹಾದೇವ ಬಾದುಲೆ ಅವರು ಅರ್ಜಿ ಸಲ್ಲಿಸಿದ್ದರು.
ಸದರಿ ಅರ್ಜಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಮೃತ ಸಚಿನ್ ಬಾದುಲೆ ಅವರ ಅವಲಂಬಿತ ಸಹೋದರ ಮಹಾದೇವ ಅವರನ್ನು ಕೇವಲ 24 ಗಂಟೆಗಳ ಅವಧಿಯಲ್ಲಿ ಗ್ರುಪ್ “ಸಿ” ಹುದ್ದೆಗೆ ನೇರ ನೇಮಕಾತಿ ಮಾಡುವ ಮೂಲಕ ಮಾನವಿಯತೆ ಮೆರೆದಿದ್ದಾರೆ.
ಬಿ.ಎ. ಪದವೀಧರರಾಗಿರುವ ಮಹಾದೇವ ಬಾದುಲೆ ಅವರನ್ನು ಪ್ರಥಮ ದರ್ಜೆ ಸಹಾಯಕರನ್ನಾಗಿ ನೇರ ನೇಮಕ‌ ಮಾಡಿ ಚಿಕ್ಕೋಡಿ ತಹಶಿಲ್ದಾರ ಕಚೇರಿಯಲ್ಲಿ ಖಾಲಿ ಇರುವ ಪ್ರ.ದ.ಸ. ಹುದ್ದೆಗೆ ನಿಯುಕ್ತಿಗೊಳಿಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಆದೇಶ ಹೊರಡಿಸಿರುತ್ತಾರೆ.

Spread the love

About Laxminews 24x7

Check Also

ಬಂಗಾರ ದರ ಮತ್ತೆ ಇಳಿಕೆ

Spread the love 26: ಬಂಗಾರ ದರ ನಿನ್ನೆಗೆ ಅಂದರೆ ಜೂನ್‌ 25ಕ್ಕೆ ಹೋಲಿಕೆ ಮಾಡಿದರೆ ಇಂದು (ಜೂನ್‌ 24) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ