ಬೆಳಗಾವಿಯಲ್ಲಿ ಪ್ರತೀ ಗಲ್ಲಿಗಲ್ಲಿಯಲ್ಲಿ ಸಾವರ್‌ಕರ್ ಯಾರು ಎಂದು ತಿಳಿಸುವ ಉದ್ದೇಶದಿಂದ ನಾವು ಪ್ರತೀ ಗಣೇಶ ಮಂಡಳಿಯಲ್ಲಿ ಸಾವರ್‌ಕರ್ ಭಾವಚಿತ್ರವನ್ನು ಅಳವಡಿಸುವಂತೆ ಅಭಿಯಾನವನ್ನು ಮಾಡುತ್ತಿದ್ದೇವೆ. ಈ ವೇಳೆ ಯಾರಾದರೂ ಕಾಂಗ್ರೆಸ್ ಅಥವಾ ಮುಸ್ಲಿಂರು ಸಾವರ್‌ಕರ್ ಭಾವಚಿತ್ರವನ್ನು ಹರಿದರೆ ಕೈ ಕತ್ತರಿಸಿ ಬಿಸಾಕುತ್ತೇವೆ ಎಂದು ಶ್ರೀ ರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಗಣೇಶೋತ್ಸವ ವೇಳೆ ಸಾವರ್‌ಕರ್ ಭಾವಚಿತ್ರ ಅಳವಡಿಸುವ ಆಂದೋಲನಕ್ಕೆ ಇಂದು ಪ್ರಮೋದ ಮುತಾಲಿಕ್ ಬೆಳಗಾವಿಯಲ್ಲಿ ಚಾಲನೆ ನೀಡಿದರು. ಈ ವೇಳೆ ಕಾಮತ್‌ಗಲ್ಲಿಯ ಗಣೇಶ ಮಂಡಳಿಗೆ ಸಾವರ್‌ಕರ್ ಭಾವಚಿತ್ರವನ್ನು ವಿತರಣೆ ಮಾಡಿ ಮಾಡಿದರು.ಒಂದು ವೇಳೆ ಹಿಂದೂಗಳು ಹಾಕಿದ ಸಾವರ್‌ಕರ್ ಬ್ಯಾನರ್‌ಗಳನ್ನು ಕಾಂಗ್ರೆಸ್ ಅಥವಾ ಮುಸಲ್ಮಾನರು ಮುಟ್ಟಿದರೆ ಕೈ ಕತ್ತರಿಸಿ ಬಿಸಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಭಾರತೀಯರಾದ ನಾವು ಇದನ್ನು ಸಮನೆ ಮಾಡಿಕೊಳ್ಳುವುದಿಲ್ಲ. ಯಾರೂ ಕೂಡ ಸಾವರ್‌ಕರ್ ಭಾವಚಿತ್ರಕ್ಕೆ ಅವಮಾನ ಮಾಡುವ ಕಾರ್ಯ ಮಾಡಬಾರದು. ಎಂದ ಮುತಾಲಿಕ್