ಬೆಂಗಳೂರು: ನಗರದಲ್ಲಿ ಸ್ಪೈ ಕ್ಯಾಮರಾ ಬಳಸಿ ಮಹಿಳೆಯರ ನಗ್ನ ಚಿತ್ರ ಸೆರೆ ಹಿಡಿದು ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಸ್ಪೈ ಕ್ಯಾಮರಾ ಬಳಸಿ ಮಹಿಳೆಯರ ನಗ್ನ ಚಿತ್ರ ಸೆರೆ ಹಿಡಿಯುತ್ತಿದ್ದ ಮಹೇಶ ಬಂಧಿತ ಆರೋಪಿ. ಮೊದಲು ಯುವತಿಗೆ ನಕಲಿ ಇನ್ಸ್ಟಾಗ್ರಾಮ್ ಮೂಲಕ ಮೆಸೇಜ್ ಮಾಡಿದ್ದ ಮಹೇಶ, ತನ್ನ ಜೊತೆ ಚಾಟ್ ಮಾಡು ಇಲ್ಲದಿದ್ದರೆ ನಗ್ನ ವಿಡಿಯೋ ಬಿಡುಗಡೆ ಮಾಡುವುದಾಗಿ ಹೆದರಿಸಿದ್ದ ಎಂದು ಪ್ರಕರಣದ ಕುರಿತು ಈಶಾನ್ಯ ವಿಭಾಗದ ಸಿಇಎನ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಹೆದರಿದ ಯುವತಿ ನಕಲಿ ಇನ್ಸ್ಟಾಗ್ರಾಮ್ ಖಾತೆಯನ್ನು ಬ್ಲಾಕ್ ಮಾಡಿದ್ದರು. ಆದರೆ, ಮತ್ತೊಂದು ಖಾತೆಯಿಂದ ಆರೋಪಿ ಯುವತಿಗೆ ಆಕೆಯ ನಗ್ನ ಫೋಟೋವನ್ನು ಕಳುಹಿಸಿದ್ದ. ಈ ಬೆಳವಣಿಗೆಗೆ ಹೆದರಿದ ಯುವತಿ ಈಶಾನ್ಯ ಸಿಇಎನ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ಸಂಬಂಧ ಇದೀಗ ಆರೋಪಿ ಮಹೇಶನನ್ನು ಬಂಧಿಸಿ ಹೆಚ್ಚಿನ ವಿಚಾರಣಗೊಳಪಡಿಸಲಾಗಿದೆ ಎಂದು ಹೇಳಿದ್ದಾರೆ.
Laxmi News 24×7