Breaking News

ಸ್ವಾತಂತ್ರ್ಯದ ಅಮೃತ ಮಹೋತ್ಸವ : ಗಂಗಾವತಿ ಕೇಂದ್ರೀಯ ಮಹಾವಿದ್ಯಾಲಯದಲ್ಲಿ ಧ್ವಜಾರೋಹಣವೇ ಇಲ್ಲ!

Spread the love

ಗಂಗಾವತಿ : ಈ ದೇಶದೆಲ್ಲೆದೆ 75 ಸ್ವಾತಂತ್ರದವರೆಗೆ ಎಲ್ಲಾ ಸರ್ಕಾರಿ ಅರೆಸರ್ಕಾರಿ ಮತ್ತು ರಾಷ್ಟ್ರ ಧ್ವಜ ಕಟ್ಟೆ ಇರುವ ಸ್ಥಳಗಳಲ್ಲಿ ಅಮೃತ ಮಹೋತ್ಸವದ ಸಡಗರದಲ್ಲಿ ಆ.13 ರಿಂದ 15 ರವರೆಗೆ ಪ್ರತಿದಿನ ಕಡ್ಡಾಯವಾಗಿ ರಾಷ್ಟ್ರಧ್ವಜಾರೋಹಣವನ್ನು ಬೆಳಿಗ್ಗೆ 6 ರಿಂದ 5.35 ಹೊರಗೆ ರಾಷ್ಟ್ರಧ್ವಜವನ್ನು ಆರೋಹಣ ಮಾಡಿ ನಂತರ ಅವರೋಹಣ ಮಾಡಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದ್ದರೂ ಗಂಗಾವತಿ ನಗರದ ಎಂಎನ್ ಎಂ ಬಾಲಕಿಯರ ಕಾಲೇಜು ಆವರಣದಲ್ಲಿರುವ ಕೇಂದ್ರೀಯ ಮಹಾವಿದ್ಯಾಲಯಕ್ಕೆ ಈ ಆದೇಶ ಅನ್ವಯವಾಗುವುದಿಲ್ಲವೇ ಪ್ರಶ್ನೆ ಮೂಡಿದೆ.

ಕೇಂದ್ರೀಯ ವಿದ್ಯಾಲಯದ ಪಕ್ಕದಲ್ಲಿರುವ ಎಂಎನ್ ಎಂ ಬಾಲಕಿಯರ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜ್ ಲಯನ್ಸ್ ಕ್ಲಬ್ ಮತ್ತು ಉರ್ದು ಪ್ರೌಢಶಾಲೆ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಶಾಲೆಗಳಲ್ಲಿ ಆ.13 ಮತ್ತು 14 ರಂದು ಬೆಳಿಗ್ಗೆ 6 ಗಂಟೆಯಿಂದಲೇ ರಾಷ್ಟ್ರಧ್ವಜಾರೋಹಣ ಮಾಡಲಾಗಿದ್ದರೂ ಕೇಂದ್ರೀಯ ವಿದ್ಯಾಲಯಗಳು ಮಾತ್ರ ರಾಷ್ಟ್ರಧ್ವಜರೋಹಣ ಮಾಡಿಲ್ಲ. ಜೊತೆಗೆ ಆ.13 ರಂದು ಮತ್ತು 14 ರಂದು ದೇಶಾದ್ಯಂತ ರಾಷ್ಟ್ರಧ್ವಜವನ್ನು ಏರಿಸುವ ಮೂಲಕ ದೇಶ ಭಕ್ತಿಯನ್ನು ಮೆರೆದಿದ್ದಾರೆ .

ಆದರೆ ಗಂಗಾವತಿಯ ಕೇಂದ್ರೀಯ ವಿದ್ಯಾಲಯ ಇದಕ್ಕೆ ವಿರುದ್ಧವಾಗಿದೆ . ಈ ಶಾಲೆಯಲ್ಲಿ ಆ.13 ಮತ್ತು 14 ರಂದು ರವಿವಾರ ಬೆಳಿಗ್ಗೆ 8 ಗಂಟೆಯವರೆಗೂ ರಾಷ್ಟ್ರಧ್ವಜಾರೋಹಣ ಮಾಡಿರಲಿಲ್ಲ . ಈ ಕುರಿತು ಪಾಲಕರು ಆಕ್ರೋಶ ವ್ಯಕ್ತಪಡಿಸಿ ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ .

ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಕೇಂದ್ರೀಯ ಮಹಾವಿದ್ಯಾಲಯ ಪ್ರತಿನಿತ್ಯವೂ ರಾಷ್ಟ್ರಧ್ವಜಾರೋಹಣವನ್ನು ಮಾಡುತ್ತದೆ ಶನಿವಾರ ರವಿವಾರ ರಜೆ ಇರುವಾಗ ರಾಷ್ಟ್ರ ಧ್ವಜಾರೋಹಣ ಮಾಡುವುದಿಲ್ಲ .

ಶನಿವಾರ ಕ್ರೀಡಾಕೂಟದ ತಯಾರಿಯಲ್ಲಿದ್ದರಿಂದ ಅದರಲ್ಲಿ ಬ್ಯುಸಿ ಆಗಿದ್ದು ಒತ್ತಡದಿಂದ ತಪ್ಪಾಗಿದ್ದು ರವಿವಾರ ರಾಷ್ಟ್ರ ಧ್ವಜಾರೋಹಣ ಮಾಡುವುದಾಗಿ ಎಂದು ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯ ರಂಗಪ್ಪ ತಿಳಿಸಿದ್ದಾರೆ .


Spread the love

About Laxminews 24x7

Check Also

ಕುರುಬಗಟ್ಟಿ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಲಾದ ‘ಹಾಲು ಉತ್ಪಾದಕರ ಸಹಕಾರಿ ಸಂಘ’ದ ಉದ್ಘಾಟನಾ

Spread the love ಕುರುಬಗಟ್ಟಿ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಲಾದ ‘ಹಾಲು ಉತ್ಪಾದಕರ ಸಹಕಾರಿ ಸಂಘ’ದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು, ಉದ್ಘಾಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ