Breaking News

ಮುಸ್ಲಿಂ ಮನೆಯಲ್ಲಿ ವರಮಹಾಲಕ್ಷ್ಮಿ ಸಂಭ್ರಮ

Spread the love

ಕೊಪ್ಪಳ ಜಿಲ್ಲೆ): ಜಿಲ್ಲೆಯ ಅಳವಂಡಿಯ ಮುಸ್ಲಿಂ ಕುಟುಂಬವೊಂದು ಹಿಂದೂ ಸಂಸ್ಕೃತಿಯ ವರಮಹಾಲಕ್ಷ್ಮಿ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಿತು.

ನಜುರುದ್ದೀನ್ ಬಿಸರಳ್ಳಿ‌ ಹಾಗೂ ರಜಿಯಾಬೇಗಂ ದಂಪತಿ ಮೂರು ವರ್ಷಗಳಿಂದ ಈ ಹಬ್ಬ ಆಚರಿಸಿಕೊಂಡು ಬಂದಿದ್ದಾರೆ.

ಈ ಸಲವೂ ಎಲ್ಲ ಹಿಂದೂ ಧಾರ್ಮಿಕ ಸಂಪ್ರದಾಯ ಪಾಲಿಸಿ ವಿಶೇಷ ಪೂಜೆ ಸಲ್ಲಿಸಿದರು. ಹಬ್ಬದ ಸಲುವಾಗಿ ಮನೆಗೆ ದೀಪಾಲಂಕಾರ ಮಾಡಿದ್ದರು. ಹೋಳಿಗೆ ನೈವೇದ್ಯ ಮಾಡಿ ಹಾಗೂ ವಿವಿಧ ತರಹದ ಹಣ್ಣುಗಳು ಸಮರ್ಪಿಸಿ ಭಾವೈಕ್ಯ ಮೆರೆದರು.

 

‘ಮೂರು ವರ್ಷಗಳ ಹಿಂದೆ ವರಮಹಾಲಕ್ಷ್ಮಿ ಹಬ್ಬದ ದಿನದಂದೇ ಹೊಸ ಮನೆಯ ಪ್ರವೇಶ ಮಾಡಿದ್ದೆವು. ಆಗಲೂ ಈ ಹಬ್ಬ ಆಚರಿಸಿದ್ದೆವು. ಹಿಂದೂ-ಮುಸ್ಲಿಂ ಎರಡೂ ದೇವರನ್ನು ಪೂಜಿಸುತ್ತೇವೆ. ಇದರಿಂದ ನಮ್ಮ ಜೀವನದಲ್ಲಿ ಬಹಳಷ್ಟು ಒಳ್ಳೆಯದನ್ನೇ ಕಂಡಿದ್ದೇವೆ’ ಎಂದು ನಜುರುದ್ದೀನ್ ಹೇಳಿದರು.


Spread the love

About Laxminews 24x7

Check Also

20 ವರ್ಷಗಳಿಂದ ಕಳ್ಳತನ: ಕುಖ್ಯಾತ ಖದೀಮ ಬೆಂಗಳೂರು ಪೊಲೀಸರ ಬಲೆಗೆ

Spread the loveಬೆಂಗಳೂರು: ಕಳ್ಳತನವನ್ನೇ ಕಾಯಕ ಮಾಡಿಕೊಂಡು ಹಾಡಹಾಗಲೇ ಮನೆಗಳ್ಳತನ ಮಾಡುತ್ತಿದ್ದ ಕುಖ್ಯಾತ ಖದೀಮನೋರ್ವ ಇಲ್ಲಿನ ವಿದ್ಯಾರಣ್ಯಪುರ ಪೊಲೀಸರ ಬಲೆಗೆ ಬಿದ್ದಿದ್ಧಾನೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ