ಬೆಳಗಾವಿ ಸ್ಮಾರ್ಟ್ ಸಿಟಿಯು ಮಹತ್ವದ ವಿಶ್ವಸಂಸ್ಥೆ ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅರ್ಬನ್ ಅಫೆಸ್ 9 ಏರ್ಪಡಿಸಿದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿರುವುದು ಯಾವ ಮಾನದಂಡದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದ ತಂಡವನ್ನು ಬೆಳಗಾವಿಗೆ ಕಳುಹಿಸಿ ಸ್ಮಾರ್ಟ್ ಸಿಟಿ ಕಾಮಗಾರಿಯನ್ನು ಪರಿಶೀಲನೆ ನಡೆಸಬೇಕು ಎಂದು ಆಮ್ ಆದ್ಮಿ ಉತ್ತರ ವಲಯ ಉಸ್ತುವಾರಿ ರಾಜಕುಮಾರ ಟೋಪಣ್ಣವರ ಆಗ್ರಹಿಸಿದ್ದಾರೆ.
ಶನಿವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಜ್‍ಕುಮಾರ್ ಟೋಪಣ್ಣವರ್ ರವರು, ದೇಶದಲ್ಲಿ ದೊಡ್ಡ ಕಳಪೆ ಮಟ್ಟದ ಕಾಮಗಾರಿ ಬೆಳಗಾವಿಯಲ್ಲಿ ಆಗಿದೆ. ನಿಜವಾಗಿಯೂ ಜನರಿಗೆ ಅನಕೂಲವಾಗುವ ರೀತಿಯಲ್ಲಿ ಕೆಲಸವಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದ ತಂಡ ಬೆಳಗಾವಿಗೆ ಕಳುಹಿಸಿ ಸ್ಮಾರ್ಟ್ ಸಿಟಿ ಕಾಮಗಾರಿಯ ತನಿಖೆ ಮಾಡಿ ಯಾರ್ಂಕ್ ನೀಡಬೇಕೆಂದು ಮನವಿ ಮಾಡಿದರು.
600 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಮಾರ್ಟ್ ಸಿಟಿಯಿಂದ ರಸ್ತೆ, ಒಳಚರಂಡಿ ನಿರ್ಮಾಣ ಮಾಡಿದರೂ ಅದು ಸರಿಯಾಗಿಲ್ಲ. ನಗರದಲ್ಲಿ ಸ್ಮಾರ್ಟ್ ಸಿಟಿಯವರು ಪಿಎಂಸಿ ಕಂಪನಿ, ಸ್ಥಳೀಯ ಶಾಸಕರು, ಹಾಗೂ ಶಾಸಕರು ನೇಮಕ ಮಾಡಿದ ಸಿಬ್ಬಂದಿಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.