Breaking News

ಮಗ ನಾಪತ್ತೆ ಎಂದು ದೂರು: ತನಿಖೆ ವೇಳೆ ಮಲತಾಯಿಯ ಅನೈತಿಕ ಸಂಬಂಧ, ಭಯಾನಕ ಸಂಚು ಬಯಲು

Spread the love

ಬಾಗಲಕೋಟೆ: ಮಗ ನಾಪತ್ತೆ ಎಂದು ತಾಯಿ ದೂರು ನೀಡಿದ್ದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಈ ಪ್ರಕರಣದಲ್ಲಿ ತಾಯಿಯೇ ಖಳನಾಯಕಿ ಎಂಬುದು ಪೊಲೀಸ್​ ತನಿಖೆಯಲ್ಲಿ ಬಯಲಾಗಿದ್ದು, ಅನೈತಿಕ ಸಂಬಂಧ ಮತ್ತು ಆಸ್ತಿ ವಿಚಾರಕ್ಕೆ ಕೊಲೆಯಾಗಿರುವ ಸಂಗತಿ ಬಯಲಾಗಿದೆ.

 

ವಸಂತ ಮಾಲಿಂಗಪ್ಪ ಕುರಬಳ್ಳಿ(24) ಕೊಲೆಯಾದವ. ಈತ ಆರೋಪಿ ಕಮಲವ್ವಳ ದತ್ತು ಮಗ. ಗೋಣಿ ಚೀಲದಲ್ಲಿ ಶವ ಪತ್ತೆಯಾದ ಪ್ರಕರಣವನ್ನು ಬೆನ್ನತ್ತಿ ಹೋದಾಗ ಕಮಲವ್ವ ಕರಾಳ ಮುಖದ ಅನಾವರಣ ಆಗಿದೆ. ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿ ಹಾಗೂ ಆಸ್ತಿ ಕೇಳಿದ್ದಕ್ಕೆ ಅಳಿಯಂದಿರು ಮತ್ತು ಪ್ರಿಯಕರನ ಜತೆ ಸೇರಿ‌ ದತ್ತುಮಗನನ್ನೇ ಕಮಲವ್ವ ಕೊಲೆ ಮಾಡಿಸಿದ್ದಾಳೆ. ಕೊಲೆ‌ ಮಾಡಿಸಿದ ಬಳಿಕ ತಾನೇ ಹೋಗಿ ಮಗ ನಾಪತ್ತೆ ಅಂತ ದೂರು ನೀಡಿದ್ದಳು.

ವಿವರಣೆಗೆ ಬರುವುದಾರೆ, ಈ ಘಟನೆ ಮುಧೋಳ ತಾಲೂಕಿನ ನಾಗಣಾಪುರ ಗ್ರಾಮದಲ್ಲಿ ನಡೆದಿದೆ. ಜೂನ್ 19 ರಂದು ಬೆಳಗ್ಗೆ 4 ಗಂಟೆಗೆ ತಾಯಿ ಕಮಲವ್ವ, ಅಳಿಯಂದಿರಾದ ಭೀಮಪ್ಪ ಮಳಲಿ, ಸಿಂಧೂರ ಬೀರಣ್ಣವರ, ಕಮಲವ್ವಳ ಪ್ರಿಯಕರ ನಿಂಗಪ್ಪ ಸೇರಿಕೊಂಡು ವಸಂತ ಮಾಲಿಂಗಪ್ಪನ ಕತ್ತು, ಮರ್ಮಾಂಗ ಹಿಸುಕಿ ಕೊಲೆ ಮಾಡಿ, ಎದೆ ಮೇಲೆ ಕಲ್ಲು ಎತ್ತಿ ಹಾಕಿದ್ದರು. ಬಳಿಕ ಶವವನ್ನು ಚೀಲದಲ್ಲಿ ತುಂಬಿಕೊಂಡು ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ದಾಸನಾಳ ಸೀಮೆಯ ಕಾಲುವೆಯಲ್ಲಿ ಬೀಸಾಡಿದ್ದರು. ಈ ಪ್ರದೇಶ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುತ್ತದೆ.

ಇದಾದ ಬಳಿಕ ಜುಲೈ 6ರಂದು ಮಗ ನಾಪತ್ತೆ ಆಗಿದ್ದಾನೆ ಅಂತಾ ಲೋಕಾಪುರ ಠಾಣೆಯಲ್ಲಿ ಕಮಲವ್ವ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಕಮಲವ್ವ ಸೇರಿದಂತೆ ಅವರ ಕುಟುಂಬದ ಮೇಲೆ ಅನುಮಾನ ಮೂಡಲು ಶರುವಾಯಿತು. ಏಕೆಂದರೆ, ಅವರ ನಡವಳಿಕೆಗಳು ಕೂಡ ಸಂದೇಹ ಬರುವ ರೀತಿ ಇತ್ತು.

ಈ ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದಾಗ ತಾಯಿ ಕಮಲವ್ವ ಹಾಗೂ ಅಳಿಯಂದಿರ ಬಣ್ಣ ಬಯಲಾಗಿದೆ. ತಿಂಗಳ ನಂತರ ಕೊಲೆಗಡುಕರ ಮುಖವಾಡ ಕಳಚಿಬಿದ್ದಿದೆ. ವಯಸ್ಸಲ್ಲದ ವಯಸ್ಸಲ್ಲಿ ಕಮಲವ್ವಳ ಅನೈತಿಕ ಸಂಬಂಧ ಆಕೆಯನ್ನು ಇಂತಹ ನೀಚ ಕೆಲಸಕ್ಕೆ ದೂಡಿದೆ. ಮಗಳ ಮಾವ (ಮಗಳ ಗಂಡನ ತಂದೆ) ನಿಂಗಪ್ಪನ ಜೊತೆ ಕಮಲವ್ವಗೆ ಅಕ್ರಮ ಸಂಬಂಧ ಇತ್ತು. ಇದೆಲ್ಲದಕ್ಕೂ ವಸಂತ ಮಾಲಿಂಗಪ್ಪ ಅಡ್ಡಿಯಾಗುತ್ತಾನೆ ಮತ್ತು ಆಸ್ತಿಯು ಭಾಗವಾಗುತ್ತದೆ ಅಂತಾ ಸಂಚು ರೂಪಿಸಿ, ಕೊಲೆ ಮಾಡಿ ಇದೀಗ ಜೈಲಿನ ಅತಿಥಿಗಳಾಗಿದ್ದಾರೆ.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ