ವಿಜಯಪುರ ಜಿಲ್ಲೆಯ ಕೋಲಾರ ತಾಲೂಕಿನಲ್ಲಿ ಬರುವ ಅರಷಣಗಿ ಗ್ರಾಮದಲ್ಲಿ ವರ್ಷಕೊಮ್ಮ ಬಸವ ಜಯಂತಿ ಆದ ದಿನದಲ್ಲಿ ಶ್ರೀ ಮಾರುತ್ತೇಶ್ವರ ಜಾತ್ರೆ ಹಾಗೂ ನೀರೋಕಳಿ ಕಾರ್ಯಕ್ರಮ ಐದು ದಿನಗಳ ಕಾಲ ಅತೀ ವಿಜೃಂಭಣೆಯಿಂದ ಮಾಡಲಾಗುತ್ತಿತ್ತು ಈ ಜಾತ್ರಗೆ ರಾಜ್ಯ ಹಾಗೂ ಬೇರೆ ಕಡೆಗಳಿಂದ ಸಾಕಷ್ಟು ಅಪಾರ ಭಕ್ತ ವೃಂದ ಹರಿದು ಬರುತ್ತಿತ್ತು ಆದರೆ ಇಡೀ ದೇಶಕ್ಕೆ ಮಾರಕವಾದ ಕೋವಿಡ್ 19 ಕರೋನಾ ಏಂಬ ರೋಗದಿಂದಾಗಿ ಇಡೀ ದೇಶವೆ ತತ್ತರಿಸುತ್ತಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೆಲವು ನಿಯಮಗಳ ಪ್ರಕಾರ ಈ ಒಂದು ಲಾಕ್ ಡೌನ್ ಹಿನ್ನಲೆಯಲ್ಲಿ ಯಾವುದೆ ಜಾತ್ರೆ.ಮದುವೆ.ಸಭೆ.ಸಮಾರಂಭಗಳಿಗೆ .ಕಡಿವಾಣ ಹಾಕಿರುವುದರಿಂದ ಈ ಬಾರಿ ನಡೆಯಬೇಕಿದ್ದ ಶ್ರೀ ಮಾರುತೇಶ್ವರ ಜಾತ್ರೆ ಯನ್ನು ಮಾಡಬಾರದು
ಏಂದು ಸ್ಥಳೀಯ ಗ್ರಾಮ ಪಂಚಾಯತ ಕಾರ್ಯಲಯದಿಂದ ಜಾತ್ರಾ ಕಮೀಟಿಯ ಸದಸ್ಯರಿಗೆ ನೋಟಿಸ್ ನೀಡಲಾಗಿತ್ತು ಈ ಜಾತ್ರಾ ಕಮೀಟಯ ಸದಸ್ಯರು ಹಾಗೂ ಗ್ರಾಮಸ್ಥರ ಸೇರಿ ಈ ಬಾರಿ ನಡೆಯಬೇಕಿದ್ದ ಜಾತ್ರೆಗೆ ಸಂಪೂರ್ಣವಾಗಿ ಬ್ರೆಕ್ ಹಾಕಿ ಅಂದರೆ ತಡೆಹಿಡಿದು ದೇವಾಲಕ್ಕೆ ಬೀಗ ಹಾಕಿ ಯಾರು ಮನೆಯಿಂದ ಹೋರಗೆ ಬರದೆ ಸರ್ಕಾರದ ಆದೇಶಕ್ಕೆ ಗೌರವ ನೀಡಿ ಮಾನವಿಯತೆ ಮೆರೆದಿದ್ದಾರೆ.ಅಷ್ಟೆ ಅಲ್ಲದೆ ಕೋಲಾರ ಠಾಣಾ ವ್ಯಾಪ್ತಿಯಲ್ಲಿ ಈ ಗ್ರಾಮದ ಸರಹದ್ದು ಬರುವುದರಿಂದ ಕೋಲಾರ ಠಾಣೆಯಿಂದ ಇಬ್ಬರು ಪೋಲಿಸ್ ಸಿಬ್ಬಂದಿಯನ್ನು ಮುಂಜಾಗ್ರತೆ ಕ್ರಮಕ್ಕಾಗಿ ಹಾಗೂ ಜಾತ್ರೇ ನಡೆಯದಂತೆ ನೋಡಿಕೊಳ್ಳಲು ನಿಯೋಜಿಸಿದ್ದರು ಪೋಲಿಸರು ಗ್ರಾಮಕ್ಕೆ ಬರುವಷ್ಟರಲ್ಲಿ ಗ್ರಾಮದ ಜಾತ್ರಾ ಮುಖ್ಯ ಕೇಂದ್ರವಾದ ಮಾರುತೇಶ್ವರ ದೇವಸ್ಥಾನ ಆವರಣ ಸಂಪೂರ್ಣವಾಗಿ ಜನರು ಇಲ್ಲದೆ ಸ್ಥಬ್ದವಾಗಿರುವುದನ್ನು ಕಂಡು ಹಾಗೂ ದೇವಾಲಯಕ್ಕೆ ಬೀಗ ಹಾಕಿರುವುದನ್ನು ಕಂಡ ಪೋಲೀಸರು ತಮ್ಮ ಮೇಲಾಧಿಕಾರಿಗಳಿಗೆ ಪೋನ್ ಮೂಲಕ ಪ್ರಸ್ತುತ ವಿಷಯದ ಬಗ್ಗೆ ತಿಳಿಸಿದಾಗ ಪೋಲಿಸ್ ಇಲಾಖೆ ಸಿಬ್ಬಂದಿ ಕೂಡಾ ಗ್ರಾಮಸ್ಥರ ಬಗ್ಗೆ ಒಳ್ಳಯ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ
ಇದೇ ವೇಳೆಯಲ್ಲಿ ಇಡೀ ದೇಶಕ್ಕೆ ಮಾರಕವಾದ ಕೋರೋನಾ ರೋಗದ ವಿರುದ್ಧ ಹಗಲಿರುಳೆನ್ನದೆ ತಮ್ಮ ಮನೆ ಹಾಗೂ ಕುಟುಂಬವನ್ನು ಲೆಕ್ಕಿಸಿದೆ ಹೋರಾಡುತ್ತಿರುವ .ಪೋಲಿಸರಿಗೆ.ಆಶಾ ಕಾರ್ಯಕರ್ತರಿಗೆ.ಆರೋಗ್ಯ ಸಿಬ್ಬಂದಿಯವರಿಗೆ .ಸ್ಥಳಿಯ ಗ್ರಾಮ ಪಂಚಾಯತಿ ಸಿಬ್ಬಂದಿಯವರಿಗೆ ಗ್ರಾಮದ ಮಾರುತೇಶ್ವರ ಜಾತ್ರಾ ಕಮೀಟಿವತಿಯಿಂದ ಈ ಭಾರಿ ಜನರ ಪ್ರಾಣವನ್ನು ಕಾಪುಡುತ್ತಿರುವ ನೀವೆ ನಮ್ಮ ಪಾಲಿಗೆ ದೇವರು ಏಂದು ಅವರನ್ನು ಜಾತ್ರಾ ಕಮೀಟಿ ವತಿಯಿಂದ ಸಾಮಾಜಿಕ ಅಂತರವನ್ನು ಕಾಯ್ದು ಕೊಂಡು ಸನ್ಮಾನಿಸಲಾಯಿತು ಈ ಸನ್ಮಾನದಿಂದ ಸರ್ಕಾರಿ ಅಧಿಕಾರಿಗಳು ಹಾಗೂ ಸನ್ಮಾನಿಸಿಕೊಂಡ ಸನ್ಮಾನಿತರು ಗ್ರಾಮದ ಬಗ್ಗೆ ಹರ್ಷ ವ್ಯಕ್ತಪಡಿಸಿದರು ಹಾಗೂ ಇಡೀ ತಾಲೂಕಿನಲ್ಲಿ ಅರಷಣಗಿ ಗ್ರಾಮ ಈ ಒಂದು ಕಾರ್ಯಕ್ಕೆ ಮಾದರಿ ಏಂದು ಹಾಡಿ ಹೋಗಳಿದರು
ಇದೆ ಸಂದರ್ಭದಲ್ಲಿ ಕೋಲಾರ ಠಾಣೆಯ ಇಬ್ಬರು ಸಿಬ್ಬಂದಿ ಸ್ಥಳಿಯ ಆಶಾ ಕಾರ್ಯಕರ್ತೆ ಸರೋಜಾ ಗೌಡರ .ಆರೋಗ್ಯ ಅಧಿಕಾರಿ ಪಾಂಡು ಹಳ್ಳದ ಗ್ರಾಮ ಪಂಚಾಯತಿ ಸಿಬ್ಬಂದಿ ಹಣಮಂತ ತುಬಾಕಿ ಹಾಗೂ ಇಬ್ಬರು ಜಾತ್ರಾ ಕಮೀಟಿ ಮುಖ್ಯಶ್ಥರನ್ನು ಸನ್ಮಾನಿಸಲಾಯಿತು
ಇದೇ ವೇಳೆಯಲ್ಲಿ ಗ್ರಾಮದ ಮುಖಂಡರಾದ ಗುಳಪ್ಪ ಹಳ್ಳಿ. ಶರಣಪ್ಪ ಬೆಲ್ಲದ .ಅಖಂಡಪ್ಪ ತುಬಾಕಿ.ಬಂಡೂರಾವ ಕುಲಕರ್ಣಿ.ದುಂಡಪ್ಪ ಮನಗೂಳಿ.ಭಿಮರಾವ ಕುಲಕರ್ಣಿ.ಮಾಳಪ್ಪ ಜಮನಕಟ್ಟಿ. ತಿಪ್ಪಣ್ಣ ಗೌಡರ.ಮಲ್ಲಿಕಾರ್ಜುನ ಕುಂಬಾರ ಉಪಸ್ಥಿತರಿದ್ದರು