Breaking News

ಚಿಕನ್ ಅಂಗಡಿ ತೆರೆದಿದ್ದೇ ಪ್ರಾಣಕ್ಕೆ ಮುಳುವು?

Spread the love

ಮಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್​ ನೆಟ್ಟಾರ್​ಗೆ ಮೊದಲೇ ಸಾವಿನ ಸುಳಿವು ಸಿಕ್ಕಿತ್ತಾ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಇದಕ್ಕೆ ಕಾರಣ, ಪ್ರವೀಣ್​ ಸಹೋದರ ರಂಜಿತ್​ ನೀಡಿರುವ ಸ್ಫೋಟಕ ಮಾಹಿತಿ.

ಕಳೆದ ಹಲವು ದಿನಗಳಿಂದ ಪ್ರವೀಣ್​ಗೆ ಕೊಲೆ ಬೆದರಿಕೆ ಕರೆಗಳು ಬರುತ್ತಿರುವ ಬಗ್ಗೆ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಕೂಡಲೇ ಕರೆಗಳು ಬರುತ್ತಿದ್ದವು. ಈ ಬಗ್ಗೆ ಬೆಳ್ಳಾರೆ ಪೊಲೀಸರಿಗೆ ತಿಳಿಸಲಾಗಿತ್ತು ಎಂದಿದ್ದಾರೆ.

ಬೆಳ್ಳಾರೆಯಲ್ಲಿ ದೊಡ್ಡ ಮಟ್ಟದಲ್ಲಿ ಚಿಕನ್, ಮಟನ್ ದಂಧೆ ನಡೆಯುತ್ತಿದೆ. ಚಿಕನ್, ಮಟನ್​, ಮೀನು ಮಾರಾಟ ಮಾಡುವ ದಂಧೆ ಮುಸ್ಲಿಮರ ಹಿಡಿತದಲ್ಲಿದೆ. ಹಲವು ದಿನಗಳ ಹಿಂದೆ ಹಿಂದೂಗಳೂ ಮಾರಾಟ ಮಾಡಲು ಆರಂಭಿಸಿದ್ದಾರೆ. ಇದರಿಂದಲೇ ಈ ಗಲಾಟೆ ಶುರುವಾಗಿರುವ ಸಂದೇಹವಿದೆ.

ಈ ಕುರಿತು ಮಾಹಿತಿ ನೀಡಿರುವ ರಂಜಿತ್​, ಒಂಬತ್ತು ತಿಂಗಳ ಹಿಂದೆಯಷ್ಟೇ ಪ್ರವೀಣ್​ ಚಿಕನ್ ಅಂಗಡಿ ತೆರೆದಿದ್ದರು. ಇದೇ ಕೊಲೆಗೆ ಕಾರಣ ಇರಬಹುದು. ಇದರ ಹಿಂದೆ ಬಹು ದೊಡ್ಡ ಜಾಲವೇ ಇದೆ. ಝಾಕೀರ್ ಮತ್ತು ಷಫೀಕ್ ಪ್ರಮುಖ ಆರೋಪಿಗಳಲ್ಲ. ಇವರ ಹಿಂದೆ ಇರುವುದು ದೊಡ್ಡ ಜಾಲವಿದೆ ಎಂದಿದ್ದಾರೆ.


Spread the love

About Laxminews 24x7

Check Also

ಆರ್​.ಅಶೋಕ್​ ಬೆಂಗಾವಲು ವಾಹನದ ಚಾಲಕ ಆತ್ಮಹತ್ಯೆ

Spread the love ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್​. ಅಶೋಕ್​ ಅವರ ಪೊಲೀಸ್​​ ಬೆಂಗಾವಲು ವಾಹನದ ಚಾಲಕ (ನಗರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ