Breaking News

ಇನ್ಮುಂದೆ ರಾತ್ರಿಯೂ ‘ರಾಷ್ಟ್ರಧ್ವಜ’ ಹಾರಿಸಬಹುದು : ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ

Spread the love

ನವದೆಹಲಿ : ಕೇಂದ್ರ ಸರ್ಕಾರ ‘ಹರ್ ಘರ್ ತಿರಂಗಾ’ ಅಭಿಯಾನವನ್ನ ಪ್ರಾರಂಭಿಸುವುದರೊಂದಿಗೆ, ಭಾರತದ ಧ್ವಜ ಸಂಹಿತೆ 2002ರಲ್ಲಿ ಬದಲಾವಣೆಗಳನ್ನ ತಂದಿದೆ. ಇನ್ನೀದು ತ್ರಿವರ್ಣ ಧ್ವಜವನ್ನ ಹಗಲು ಮತ್ತು ರಾತ್ರಿ ಸಾರ್ವಜನಿಕರಿಗೆ ಹಾರಿಸಲು ಅನುಮತಿ ನೀಡುತ್ತದೆ.

ಪ್ರಗತಿಪರ ಸ್ವತಂತ್ರ ಭಾರತದ 75ನೇ ವರ್ಷದ ಸ್ಮರಣಾರ್ಥ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 13ರಿಂದ 15ರವರೆಗೆ ‘ಹರ್ ಘರ್ ತಿರಂಗಾ’ ಆಚರಿಸಲಾಗುವುದು.

ಎಲ್ಲಾ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಭಾರತೀಯ ರಾಷ್ಟ್ರಧ್ವಜದ ಪ್ರದರ್ಶನ, ಹಾರಿಸುವಿಕೆ ಮತ್ತು ಬಳಕೆಯು ಭಾರತದ ಧ್ವಜ ಸಂಹಿತೆ, 2002 ಮತ್ತು ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ, 1971ರ ಅಡಿಯಲ್ಲಿ ನಿಯಂತ್ರಿಸಲ್ಪಡುತ್ತದೆ ಎಂದು ಹೇಳಿದ್ದಾರೆ.

ಜುಲೈ 20, 2022ರಂದು ಒಂದು ಆದೇಶದ ಮೂಲಕ ಭಾರತದ ಧ್ವಜ ಸಂಹಿತೆ, 2002 ಅನ್ನು ಮತ್ತಷ್ಟು ತಿದ್ದುಪಡಿ ಮಾಡಲಾಗಿದೆ. ಇನ್ನು ಭಾರತದ ಧ್ವಜ ಸಂಹಿತೆ, 2002ರ ಭಾಗ -2ರ ಪ್ಯಾರಾ 2.2ರ ಖಂಡ (11)ಅನ್ನು ಈಗ ಈ ರೀತಿ ಪರಿಗಣಿಸಲಾಗುವುದು, (xi) ‘ಸಾರ್ವಜನಿಕ ಸದಸ್ಯನ ಮನೆಯ ಮೇಲೆ ತೆರೆದ ಸ್ಥಳದಲ್ಲಿ ಧ್ವಜವನ್ನ ಪ್ರದರ್ಶಿಸಲಾಗುತ್ತದೆ, ಧ್ವಜ ಹಗಲು ಮತ್ತು ರಾತ್ರಿ ಹಾರಿಸಬಹುದು’.

ಅಂದ್ಹಾಗೆ, ಈ ಹಿಂದೆ, ತ್ರಿವರ್ಣ ಧ್ವಜವನ್ನ ಹವಾಮಾನದ ಪರಿಸ್ಥಿತಿಗಳನ್ನ ಲೆಕ್ಕಿಸದೆ, ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಮಾತ್ರ ಹಾರಿಸಲು ಅನುಮತಿಸಲಾಗಿತ್ತು.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ