Breaking News

ದೇಶದಲ್ಲೇ ಬೆಳಗಾವಿ ಜಿಲ್ಲಾಸ್ಪತ್ರೆ ಎಲ್ಲರಿಗೂ ಮಾದರಿ ಆಗಲಿ: ಶಾಸಕ ಅನಿಲ ಬೆನಕೆ

Spread the love

ಬೆಳಗಾವಿ: ದೇಶದಲ್ಲೇ ಸರ್ಕಾರಿ ಆಸ್ಪತ್ರೆಗಳ ಪೈಕಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆ ಇಂದು 12ನೇ ಸ್ಥಾನದಲ್ಲಿದ್ದು, ಬರುವ ಒಂದು ವರ್ಷದಲ್ಲಿ ಬಿಮ್ಸ್ ಆಸ್ಪತ್ರೆಯನ್ನು 5 ನೇ ಸ್ಥಾನಕ್ಕೆ ತರಲು ಎಲ್ಲ ತರಹದ ಸೌಲಭ್ಯ ಕಲ್ಪಿಸಲು ಶ್ರಮಿಸಲಾಗುವು ಎಂದು ಬೆಳಗಾವಿ ಉತ್ತರ ಮತ ಕ್ಷೇತ್ರದ ಶಾಸಕ ಅನಿಲ ಬೆನಕೆ ಅವರು ತಿಳಿಸಿದರು. ‌

ಶುಕ್ರವಾರ ನಗರದ ಬಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಸಹಾಯ ವಾಣಿ, ಅನ್ ಲೈನ್ ಪಾವತಿ ಕೌಂಟರ್, ಹೆಲ್ತ ಡೆಸ್ಕ್, ಹಿರಿಯ ನಾಗರಿಕರ ಮತ್ತು ವಿಶೇಷಚೇತನರ ಕೌಂಟರ್, ಬಿಮ್ಸ್ ಸಿಬ್ಬಂದಿಗಳಿಗೆ ಶಿಸು ವಿಹಾರ, ನವಿಕರಣವಾದ ಪೆಟ್ರಾರ್ಟಿಕ್ ವಾರ್ಡ್ ಉದ್ಘಾಟನೆ ಮಾಡಿದರು. ಬಳಿಕ ಬಿಮ್ಸ್ ಸಭಾಗ್ರಹದಲ್ಲಿ ಎಸ್ ಸಿ/ ಎಸ್ ಟಿ ವಿದ್ಯಾರ್ಥಿಗಳಿಗೆ ಲಾಪ್ ಟಾಪ್ ವಿತರಣೆ ಮಾಡಿದರು. ಈ ವೇಳೆ ಶಾಸಕ ಅನಿಲ ಬೆನಕೆ ಅವರಿಗೆ ಪ್ರಾದೇಶಿಕ ಆಯುಕ್ತರು ಹಾಗೂ ಬಿಮ್ಸ್ ಆಡಳಿತ ಮಂಡಳಿ ಸಾಥ್ ನೀಡಿತು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಶಾಸಕ ಅನಿಲ ಬೆನಕೆ ಅವರು, ಪ್ರಾದೇಶಿಕ ಆಯುಕ್ತರು ಬಿಮ್ಸ್ ಆಸ್ಪತ್ರೆಯ ಚಾರ್ಜ್ ತಗೊಂಡ ಬಳಿಕ ಬಿಮ್ಸ್ ಸುಧಾರಣೆ ಆಗಿದೆ. 6 ತಿಂಗಳಿನಿಂದ ಬಿಮ್ಸ್ ಆಸ್ಪತ್ರೆ ತುಂಬಾ ಸುಧಾರಣೆ ಆಗಿದೆ. ನಿರಂತರ ಪ್ರಯತ್ನದಿಂದ ಬಿಮ್ಸ್ ಆಸ್ಪತ್ರೆ ಸುಧಾರಣೆ ಆಗಿದೆ. ಮನುಷ್ಯನಿಗೆ ಇಚ್ಛಾಶಕ್ತಿ ಇದ್ರೆ ಎಲ್ಲವೂ ಸಾಧ್ಯ ಎಂದು ಪ್ರಾದೇಶಿಕ ಆಯುಕ್ತ ಗುಣಗಾನ ಮಾಡಿದರ

 

 

ಈ ಆಸ್ಪತ್ರಬೆಳಗಾವಿಗೆ ಸೀಮಿತ ಅಲ್ಲ.‌ ಅಕ್ಕಪಕ್ಕದ ರಾಜ್ಯಗಳಾದ ಗೋವಾ, ಮಹಾರಾಷ್ಟ್ರ ಜನರು ನಮ್ಮ ಆಸ್ಪತ್ರೆಗೆ ಬಗ್ಗೆ ಇಂದು ಮಾತಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ನಾವು ಬಿಮ್ಸ್ ಆಸ್ಪತ್ರೆ ದೇಶದಲ್ಲೇ 12 ನೇ ಸ್ಥಾನದಲ್ಲಿದೆ. ಬರವು ವರ್ಷದಲ್ಲಿ ಇಡೀ ದೇಶದಲ್ಲಿ 5 ನೇ ಸ್ಥಾನದಲ್ಲಿ ತರುವ ಹಾಗೆ ಮಾಡೋಣ ಎಂದು ತಿಳಿಸಿದರು.

ಬಿಮ್ಸ್ ಆಸ್ಪತ್ರೆಯು ಮೂಲಭುತ ಸೌಲಭ್ಯದಲ್ಲಿ 5ನೇ ಸ್ಥಾನದಲ್ಲಿದೆ. ಆಸ್ಪತ್ರೆಯ ಎಲ್ಲಾ ಕಾರ್ಯಗಳು ಸರಿಯಾದ ಸಮಯಕ್ಕೆ ಆಗಬೇಕು.‌ ಈಗಾಗಲೇ ಕಾಮಗಾರಿ ಹಂತದಲ್ಲಿರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಐದಾರು ತಿಂಗಳಲ್ಲಿ ಜನರ ಉಪಯೋಗಕ್ಕೆ ಬರಲಿದೆ. ತಾಯಿ-ಮಕ್ಕಳ ಆಸ್ಪತ್ರೆಯ ಕಾಮಗಾರಿ ಶೀಘ್ರದಲ್ಲೇ ಆರಂಭ ಆಗಲಿದೆ. ಜೊತೆಗೆ ನರ್ಸಿಂಗ್ ಟ್ರೈನಿಂಗ್ ಸೆಂಟರ್ ಆರಂಭ ಆಗಲಿದೆ ಎಂದು ತಿಳಿಸಿದರು. ‌

 

ಬಳಿಕ ಮಾತನಾಡಿ ಪ್ರಾದೇಶಿಕ ಆಯುಕ್ತ ಆದಿತ್ಯ ಅಮ್ಲಾನ್ ಬಿಸ್ವಾಸ್ ಅವರು, ಯಾರು ನಿರ್ಗತಿಕರು ಇದ್ದರಾ, ಯಾರಿಗೆ ಸಹಾಯ ಸಿಗುವುದಲ್ಲ ಅಂತವರ ಬಗ್ಗೆ ವ್ಯವಸ್ಥಿತವಾಗಿ ಕಾಳಜಿ ವಹಿಸಬೇಕು.‌ ಜನರ ಬಗ್ಗೆ ಕಾಳಜಿ, ನಿಷ್ಠೆ, ಪ್ರಾಮಣಿಕತೆಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.

ಇಂದು ಎಲ್ಲರ ಶ್ರಮದಿಂದ ಬಿಮ್ಸ್ ಬದ್ಧತೆಯ ಸಾಮಾಜಿಕ ಸಂಸ್ಥೆಯಾಗಿದೆ. ಇಡೀ ದೇಶದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಮ್ಮ ಬಿಮ್ಸ್ 12 ನೇ ಸ್ಥಾನ ಪಡೆದುಕೊಂಡಿದೆ. ಅದರಲ್ಲೂ ಮೂಲಭುತ ಸೌಕರ್ಯದಲ್ಲಿ ಐದನೇ ಸ್ಥಾನದಲ್ಲಿ ಪಡೆದುಕೊಂಡಿದೆ. ಹಾಗೂ ಅಕ್ಯಾಡೆಮಿಕ್ ವಾಗಿ 9 ನೇ ಸ್ಥಾನದಲ್ಲಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.‌

ಈ ವೇಳೆ ಬಿಮ್ಸ್ ಆಸ್ಪತ್ರೆಯ ಪ್ರಭಾರಿ ನಿರ್ದೇಶಕರಾ ಈರಣ್ಣ ಪ್ರಭೇದ, ವೈಧ್ಯಕೀಯ ಅಧ್ಯಕ್ಷರಾದ ಎಬಿ ಪಾಟೀಲ್, ಬಿಮ್ಸ್ ಸಿಇಓ ಶಾಹಿದಾ ಆಫ್ರಿನ್, ಜಿಲ್ಲಾ ಶಸ್ತ್ರಚಿಕಿತ್ಸಕರು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​: ಅನಾಮಿಕನ ಮುಖವಾಡ ಕಳಚಿದ ಮಾಜಿ ಪತ್ನಿ

Spread the loveಮಂಡ್ಯ, (ಆಗಸ್ಟ್ 21): ನೂರಾರು ಶವ ಹೂತಿರುವುದಾಗಿ ಆರೋಪಿಸಿ ಧರ್ಮಸ್ಥಳ ಪ್ರಕರಣವನ್ನು (Dharmasthala Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಕಾರಣವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ