ಬೆಳಗಾವಿ : ಹರ್ಷ ಕುಟುಂಬಕ್ಕೆ ನನ್ನ ಮಾತು ಕೇಳುವ ವ್ಯವದಾನ ಇಲ್ಲಾ. ಅವರ ಹೇಳಿದ ರೀತಿಯಲ್ಲಿ ನಾನು ಮಾಡಲಿಕ್ಕೆ ಆಗಲ್ಲಾ ಕಾನೂನು ಪ್ರಕಾರ ನಡೆದುಕೊಳ್ಳಬೇಕು. ಒಬ್ಬ ಗೃಹ ಸಚಿವನಾಗಿ ಆರೋಪಿಗಳನ್ನ ಎಳೆ ತಂದು ಅವರ ಮುಂದೆ ಪೈರ ಮಾಡಕ್ಕಾಗುತ್ತಾ?
ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಅರಗ ಜ್ಞಾನೇಂದ್ರ, ಹರ್ಷ ಕೊಲೆಯಿಂದ ಅವರ ಕುಟುಂಬಕ್ಕೆ ಎಷ್ಟು ನೋವಾಗಿದೆಯೋ ಅಷ್ಟೇ ನೋವು ನನಗು ಆಗಿದೆ. ಕೊಲೆ ಆರೋಪಿಗಳು ಜೈಲಿನಿಂದ ಪೋನ ಬಳಕೆ ಮಾಡಿರುವುದು ಕಂಡು ಬಂದ ತಕ್ಷಣವೆ ಕ್ರಮ ಆಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳನ್ನ ಕಳೆದಿ ಈಡಿ ಜೈಲನ್ನೆ ಜಾಲಾಡಿ ಬಿಟ್ಟಿದ್ದೇವೆ. ಮೊದಲು ಸೀಜ್ ಮಾಡುವ ಪ್ರಕ್ರೀಯೆ ಮಾತ್ರ ಇತ್ತು ಈಗ ಅವರ ಮೇಲೆ ಹಾಗೂ ಒಳಗೆ ಬಿಟ್ಟ ಸಿಬ್ಬಂದಿಯ ಮೇಲು ಎಪ್.ಐ.ಆರ್.
ಆಗಿದೆ. ತಪ್ಪು ಮಾಡಿದ ಸಿಬ್ಬಂದಿಯನ್ನ ಅಮಾನತ್ತು ಮಾತ್ರ ಅವರನ್ನು ಅದೆ ಜೈಲಿನಲ್ಲಿ ತಂದು ಕೂಡಿಸುವ ಕೆಲಸ ಮಾಡುತ್ತೇವೆ. ನಾನು ಹರ್ಷ ಕುಟುಂಬ ಬೇಟಿ ಮಾಡಿಲ್ಲಾ ಅಂತಲ್ಲಾ ನಾನು ಕುಟುಂಬವನ್ನ ಭೇಟಿ ಮಾಡಿದ್ದೇನೆ. ಭೇಟಿ ಮಾಡಿದಾಗ ಏನೇನೂ ಮಾತನಾಡುತ್ತಾರೆ. ಯಾವತ್ ಮಾಡುತ್ತಿರಿ, ಯಾವ ಕ್ಷಣದಲ್ಲಿ ಮಾಡುತ್ತಿರಿ ಅಂತೆಲ್ಲಾ ಕೇಳುತ್ತಾರೆ.
ಹೀಗೆ ಮಾತನಾಡಿದ್ರೆ ನಾನು ಗ್ರಹ ಸಚಿವನಾಗಿ ಏನು ಮಾತನಾಡಲು ಸಾಧ್ಯ ಹಾಗಾಗಿ ಜಾಸ್ತಿ ಮಾತನಾಡಲ್ಲಾ ಎಂದಿರುವೆ ಎಂದರು.