ಬೆಂಗಳೂರು: ACB ಅಧಿಕಾರಿಗಳು ಶಾಸಕ ಜಮೀರ್ ಅಹ್ಮದ್ ಕುರಿತು ಜಾರಿ ನಿರ್ದೇಶನಾಲಯ (ED) ನೀಡಿರುವ ರಿಪೋರ್ಟ್ ನೋಡಿ ಬೆಚ್ಚಿ ಬಿದ್ದಿದ್ದಾರೆ. ಜಮೀರ್ ಒಂದಲ್ಲಾ..ಎರಡಲ್ಲಾ.. 200 ಪರ್ಸೆಂಟ್ ಅಧಿಕ ಆಸ್ತಿಗಳಿಸಿದ್ಧಾರೆ ಎಂಬ ಮಾಹಿತಿ ದೊರಕಿದೆ.
ಜಮೀರ್ ಬಳಿ ಇರುವ ಬಂಗಲೆಯೇ 200 ಕೋಟಿ ಬೆಲೆ ಬಾಳುವ ಮಾಹಿತಿ ದೊರಕಿದೆ. ಬಂಗಲೆ ನಿರ್ಮಾಣಕ್ಕೆ 100 ಕೋಟಿ ಖರ್ಚು ಮಾಡಿದ್ದಾರೆ. ACB ಫ್ರೇಜರ್ ಟೌನ್ ಬಂಗಲೆ ಖರ್ಚು ವೆಚ್ಚದ ಕಂಪ್ಲೀಟ್ ಆಡಿಟ್ ಕೇಳಿದ್ದಾರೆ. ಮನೆಗೆ ಖರ್ಚು ಮಾಡಿರುವ ಲೆಕ್ಕಪತ್ರಗಳ ವಿವರ ನೀಡುವಂತೆ ನೋಟಿಸ್ ನೀಡಿದೆ.
ಜಾರಿ ನಿರ್ದೇಶನಾಲಯ 2005-2018ವರೆಗಿನ ಎಲೆಕ್ಷನ್ ಅಫಿಡವಿಟ್ ಪರಿಶೀಲನೆ ನಡೆಸಿದ್ದು, ಪ್ರತಿ ಎಲೆಕ್ಷನ್ ಆಸ್ತಿ ಘೋಷಣೆಯಲ್ಲಿ ಶೇ.60ರಿಂದ 80ರಷ್ಟು ಆಸ್ತಿ ಡಬಲ್ ಆಗಿದೆ. ಬೇರೆ ಟ್ರಾನ್ಸ್ಪೋರ್ಟ್ ಕಂಪನಿ ನಷ್ಟದಲ್ಲಿದ್ರೂ ನ್ಯಾಷನಲ್ ಟ್ರಾವೆಲ್ಸ್ಗೆ ಲಾಭವಾಗಿದೆ. ಸಿನಿಮಾ ನಿರ್ಮಾಣ, ಹೋಟೆಲ್ ಬ್ಯುಸಿನೆಸ್, ರಿಯಲ್ ಎಸ್ಟೇಟ್ಗೆ ಹಣ ಹೂಡಿಕೆ ಮಾಡಿದ್ಧಾರೆ.
ED ಈ ಎಲ್ಲಾ ವ್ಯವಹಾರದ ರಿಪೋರ್ಟ್ ಪಡೆದು ದಾಳಿ ಮಾಡಿದ್ಧಾರೆ. ED ಸಂಗ್ರಹಿಸಿದ್ದ ರಿಪೋರ್ಟ್ ಮೇಲೆ ACB ರೇಡ್ ಮಾಡಿದ್ದಾರೆ. ಶಾಸಕ ಜಮೀರ್ ಅಕ್ರಮ ಆಸ್ತಿ ಕಂಟಕದಲ್ಲಿ ಜೈಲು ಸೇರುತ್ತಾರಾ ಹಾಗೂ ಶೇ. 200ರಷ್ಟು ಆಸ್ತಿ ಹೆಚ್ಚಳ ಜಮೀರ್ ಅಹ್ಮದ್ಗೆ ಕಂಟಕವಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.