Breaking News

ಟೈರ್‌ಗೆ ಬೆಂಕಿ ಹಚ್ಚುವ ವೇಳೆ ಮೂವರಿಗೆ ತಗುಲಿತು ಬೆಂಕಿ..!

Spread the love

ಹಾವೇರಿ; ಟೈರ್‌ಗೆ ಬೆಂಕಿ ಹಚ್ಚುವ ವೇಳೆ ಪ್ಯಾಂಟ್‌ಗೆ ಬೆಂಕಿ ತಗುಲಿ ಮೂವರು ಪ್ರತಿಭಟನಾಕಾರರು ಗಾಯಗೊಂಡಿರುವ ಘಟನೆ ಹಾವೇರಿಯಲ್ಲಿ ನಡೆದಿದೆ. ಉದಯಪುರದಲ್ಲಿ ನಡೆದ ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ಭಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು.

ಈ ವೇಳೆ ಮೂವರು ಮಂದಿಯ ಪ್ಯಾಂಟ್‍ಗೆ ಬೆಂಕಿ ಕಿಡಿ ತಗುಲಿದ ಘಟನೆ ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ನಡೆದಿದೆ.

ಹಾವೇರಿಯಲ್ಲಿ ಭಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಟೈರ್ ಸುಡಲು ಅವಕಾಶ ನೀಡದ್ದಕ್ಕೆ ಪೊಲೀಸರ ಜೊತೆ ಕಾರ್ಯಕರ್ತರ ವಾಗ್ವಾದ ನಡೆಸಿದರು. ಪೊಲೀಸರ ವಿರೋಧದ ನಡುವೆಯೂ ಟೈರ್‌ಗೆ ಬೆಂಕಿ ಹಚ್ಚಿದ ನಂತರ ಮೂವರು ಕಾರ್ಯಕರ್ತರ ಪ್ಯಾಂಟಿಗೆ ಬೆಂಕಿಯ ಕಿಡಿ ಹತ್ತಿಕೊಂಡಿದೆ. ಪ್ಯಾಂಟ್‍ಗಳಿಗೆ ಬೆಂಕಿ ಹತ್ತಿದ್ದನ್ನು ಗಮನಿಸಿ ತಕ್ಷಣವೇ ಬೆಂಕಿಯನ್ನು ಕಾರ್ಯಕರ್ತರು ಆರಿಸಿದ್ದಾರೆ.


Spread the love

About Laxminews 24x7

Check Also

20 ವರ್ಷಗಳಿಂದ ಕಳ್ಳತನ: ಕುಖ್ಯಾತ ಖದೀಮ ಬೆಂಗಳೂರು ಪೊಲೀಸರ ಬಲೆಗೆ

Spread the loveಬೆಂಗಳೂರು: ಕಳ್ಳತನವನ್ನೇ ಕಾಯಕ ಮಾಡಿಕೊಂಡು ಹಾಡಹಾಗಲೇ ಮನೆಗಳ್ಳತನ ಮಾಡುತ್ತಿದ್ದ ಕುಖ್ಯಾತ ಖದೀಮನೋರ್ವ ಇಲ್ಲಿನ ವಿದ್ಯಾರಣ್ಯಪುರ ಪೊಲೀಸರ ಬಲೆಗೆ ಬಿದ್ದಿದ್ಧಾನೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ