ಖಾನಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮಣ ಎಕ್ಕುಂಡಿ ಸೇರಿದಂತೆ ರಾಜ್ಯದ 56 ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ.
ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ವರ್ಗಾವಣೆ ಮಾಡಲಾಗಿದ್ದು, ಶಿಕ್ಷಣಾಧಿಕಾರಿ ಇಲ್ಲವೇ ತತ್ಸಮಾನ ಹುದ್ದೆಗಳಿಗೆ ನಿಯುಕ್ತಿಗೊಳಿಸಲಾಗಿದೆ.
ಖಾನಾಪುರ ಬಿಇಒ ಲಕ್ಷ್ಮಣ ಎಕ್ಕುಂಡಿ ಅವರನ್ನು ಮುನಿರಾಬಾದ್ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರದ ಹಿರಿಯ ಉಪನ್ಯಾಸಕರನ್ನಾಗಿ ವರ್ಗಾಯಿಸಲಾಗಿದೆ.
ಚಿಕ್ಕೋಡಿಯ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ದೀಪಕ್ ಕುಲಕರ್ಣಿ ಅವರನ್ನು ಧಾರವಾಡ ಡಯೆಟ್ ಗೆ ವರ್ಗಾಯಿಸಲಾಗಿದೆ.
Laxmi News 24×7