ಕಾಗವಾಡ ತಾಲೂಕಿನ ಐನಾಪುರ್ ಪಟ್ಟಣದಲ್ಲಿ ೧೦ ಪಂಪ್‌ಸೆಟ್‌ಗಳ ಸುಮಾರು ೪ ಲಕ್ಷ, ರೂ. ಮೌಲ್ಯದ ಕೇಬಲನ್ನ ಸುಟ್ಟು ಅದರಲ್ಲಿರುವ ತಾಮ್ರದ ತಂತಿಯನ್ನು ಕಳ್ಳತನ ಮಾಡಿದ ಘಟನೆ ನಡೆದಿದೆ. ಇದರಿಂದ ಲಕ್ಷಾಂತರ ರೂಪಾಯಿಯ ನಷ್ಟ ಅನುಭವಿಸಿದ ರೈತರು ತೊಂದರೆಯಲ್ಲಿದ್ದಾರೆ.
ಶುಕ್ರವಾರ ರಾತ್ರಿ ಕೃಷ್ಣಾ ನದಿ ತೀರದಲ್ಲಿ ಇರುವ ವಿದ್ಯುತ ಪಂಪ್ಸೆಟ್ ಗಳ ಕ್ಕೆಬಲ ಕಳ್ಳತನ ಮಾಡಿ ನದಿ ತೀರದಲ್ಲಿಯೇ ಕಬ್ಬಿನಗದ್ದೆಯಲ್ಲಿ ಕೇವಲ ಸುಟ್ಟು ಅದರಲ್ಲಿರುವ ತಾಮ್ರದ ತಂತಿಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.ಐನಾಪುರ ರಲ್ಲಿಯೇ ಒಣ ಬೇಸಾಯ ಮಾಡುವ ರೈತರಿಗೆ ಆಗಿನ ಸಂಸದ ಪ್ರಕಾಶ್ ಹುಕ್ಕೇರಿ ಇವರು ೧ ಕೋಟಿ ೪೭ ಲಕ್ಷ ವೆಚ್ಚ ಮಾಡಿ ರಾಜ್ಯ ಸರ್ಕಾರದಿಂದ ೧೦೦ ಎಕರೆ ಕ್ಷೇತ್ರಕ್ಕಾಗಿ ನೀರಾವರಿ ಯೋಜನೆ ಮಾಡಿಕೊಟ್ಟಿದ್ದರು .ಯೋಜನೆಯ ೧ ಲಕ್ಷ ಕಿಮ್ಮತ್ತಿನ ಕೇಬಲ್ ಕಳ್ಳತನ ಮಾಡಿದ್ದಾರೆ.
ಇದೇ ರೀತಿ ಮಂಗಸೂಳಿ ಗ್ರಾಮದ ಸೇತಕರಿ ವಿಕಾಸ್ ನೀರಾವರಿ ಯೋಜನೆ, ಮೂಳೆ ಗ್ರಾಮದ ಕಾಳಿದಾಸ್ ಅಭಿವೃದ್ಧಿ ಸಂಘ, ಐನಾಪುರ ಪಾಯಪ್ಪ ಕುಡವಕ್ಕಲಿಗಿ ಹೀಗೆ ಹತ್ತು ಹತ್ತು ಪಂಪ್ಸೆಟ್ಗಳ ಕೇಬಲ್ ಕಳ್ಳತನ ಮಾಡಿ ನದಿಯ ತೀರದಲ್ಲಿರುವ ಕಬ್ಬಿನ ಗದ್ದೆಯಲ್ಲಿ ಕೇಬಲ್ ಸುಟ್ಟು ಅದರಲ್ಲಿ ತಾಂಬರ ತಂತಿ ತೆಗೆದುಕೊಂಡು ಹೋಗಿದ್ದಾರೆ.
ಈ ನೀರಾವರಿ ಯೋಜನೆಯಲ್ಲಿ ಸುಮಾರು ೪೦೦ ಕುಟುಂಬಗಳು ಬದುಕುತ್ತಾರೆ ಈಗ ಮಳೆಯು ಕೈಕೊಟ್ಟಿದ್ದು ನದಿಯಲ್ಲಿ ನೀರು ಸೆಳೆಯಲು ಪ್ರಯತ್ನಿಸಿದರು ಕೇವಲ ಕಳತನವಾಗಿದೆ, ನಮ್ಮ ರೈತರ ಗೋಳು ಕೇಳುವರ್ಯಾರು ಎಂದು ನೂಂದ್ ರೈತರಾದ ಅಮಗೊಂಡ ಒಡೆಯರ, ಮತ್ತೆ ಸಂತೋಷ್ ಗಾಣಿಗೇರ್ ತಮ್ಮ ಅಳಲನ್ನು ತೋಡಿಕೊಂಡರು.ಕೇಬಲ ಕಳ್ಳತನ ವಾಗಿದ್ದರಿಂದ ಇಲ್ಲಿಯ ರೈತರು ಕಾಗವಾಡ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ .ಸ್ಥಳೀಯ ಪೊಲೀಸ್ ಠಾಣೆಯ ಎ.ಎಸ್.ಐ ಹೊರಟ್ಟಿ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.ಕೇವಲ ಕಡತನ ವಾಗಿದ್ದರಿಂದ ನಾವು ಎಲ್ಲ ರೈತರು ಕಂಗಾಲಾಗಿದ್ದು ಶೀಘ್ರದಲ್ಲಿ ಪೊಲೀಸ್ ಇಲಾಖೆಯವರು ತನಿಖೆ ಕೈಗೊಂಡು ನಮಗೆ ನ್ಯಾಯ ಒದಗಿಸಿ.
ಪೊಲೀಸ್ ಇಲಾಖೆಗೆ ಸ್ಥಳೀಯ ಶಾಸಕರಾದ ಶ್ರೀಮಂತ ಪಾಟೀಲ್ ಆದೇಶ ನೀಡಬೇಕೆಂದು ಇಲ್ಲಿಯ ರೈತರು ಕೇಳಿಕೊಂಡಿದ್ದಾರೆ.