Breaking News

PUC ಫಲಿತಾಂಶ ‌ಪ್ರಕಟ- 61.88% ಮಕ್ಕಳು ಪಾಸ್‌, ವಿದ್ಯಾರ್ಥಿನಿಯರೇ ಮೇಲುಗೈ

Spread the love

ಬೆಂಗಳೂರು: 2021-2022ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ‌ಪ್ರಕಟವಾಗಿದ್ದು, ರಾಜ್ಯದಲ್ಲಿ 61.88% ಮಕ್ಕಳು ಪಾಸ್‌ ಆಗಿದ್ದಾರೆ. ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಫಲಿತಾಂಶ ಪ್ರಕಟಿಸಿದ್ದು, ಈ ವೇಳೆ ಮಾತನಾಡಿದ ಅವರು, ಮಕ್ಕಳು ನಿರೀಕ್ಷೆಗಿಂತ ಚೆನ್ನಾಗಿ ಮಾಡಿದ್ದಾರೆ. ಕೋವಿಡ್ ಮಧ್ಯೆ ಉತ್ತಮವಾಗಿ ಮಕ್ಕಳು ಪರೀಕ್ಷೆ ಬರೆದಿದ್ದಾರೆ. ಮಕ್ಕಳು ಸ್ಪೋಟೀವ್ ಆಗಿ ಫಲಿತಾಂಶ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ದಕ್ಷಿಣ ಕನ್ನಡ ಮೊದಲ ಸ್ಥಾನ (88.02%) ಪಡೆದಿದ್ದು, 2 ಹಾಗೂ 3 ನೇ ಸ್ಥಾನದಲ್ಲಿ ಕ್ರಮವಾಗಿ ಉಡುಪಿ (86.38%) ವಿಜಯಪುರ (77.14%) ಪಡೆದಿದ್ದು, ಕೊನೆ ಸ್ಥಾನ ಚಿತ್ರದುರ್ಗ (49.31%) ಪಡೆದುಕೊಂಡಿದೆ. ವಿದ್ಯಾರ್ಥಿಗಳು ಫಲಿತಾಂಶವನ್ನು www.karresults.nic.in ಹಾಗೂ www.pue.kar.nic.in ವೆಬ್‌ಸೈಟ್‌ ಮೂಲಕ ವೀಕ್ಷಿಸಬಹುದು.


Spread the love

About Laxminews 24x7

Check Also

ಗ್ರಾಮ ಪಂಚಾಯತ್​ ವ್ಯಾಪ್ತಿಯಲ್ಲಿ ಬಡಾವಣೆಗಳನ್ನು ರೂಪಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸುತ್ತೋಲೆ

Spread the loveಬೆಂಗಳೂರು : ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ಥಳೀಯ ಯೋಜನಾ ಪ್ರದೇಶವನ್ನು ಹೊರತುಪಡಿಸಿದ ಪ್ರದೇಶಗಳಲ್ಲಿನ ಭೂಪರಿವರ್ತಿತ ಜಮೀನುಗಳಲ್ಲಿ ಬಡಾವಣೆಗಳ ವಿನ್ಯಾಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ