Breaking News

ಪರಿಷತ್ ಫೈಟ್ ಯಾರಿಗೆ ಎಲ್ಲೆಲ್ಲಿ ಎಸ್ಟೇಟ್ ಮತ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Spread the love

ಬೆಳಗಾವಿ : ಕರ್ನಾಟಕ ವಾಯವ್ಯ ಶಿಕ್ಷಕರ ಮತಕ್ಷೇತ್ರ ಮತ್ತು ಕರ್ನಾಟಕ ಪಶ್ಚಿಮ ಮತಕ್ಷೇತ್ರಗಳ ಚುನಾವಣೆಯ ಫಲಿತಾಶ ಪ್ರಕಟಗೊಂಡಿದ್ದು, ಈ ಎರಡು ಕ್ಷೇತ್ರಗಳ ಪೈಕಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ತಲಾ ಒಂದು ಸ್ಥಾನ ಗಳಿಸಿವೆ. ವಾಯವ್ಯ ಪದವೀಧರ ಕ್ಷೇತ್ರದ ಮತ ಎಣಿಕೆ ಮುಕ್ತಾಯದ ಹಂತದಲ್ಲಿದ್ದು, ಹನುಮಂತ ನಿರಾಣಿ ನಿರಾಯಾಸ ಗೆಲುವು ಸಾಧಿಸಿದ್ದಾರೆ.

 

ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಗೆಲುವು ಸಾಧಿಸಿದ್ದಾರೆ.
ಅದೇ ರೀತಿ ವಾಯವ್ಯ ಶಿಕ್ಷಕರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪ್ರಕಾಶ್ ಹುಕ್ಕೇರಿ ಅವರು ಗೆಲುವು ಸಾಧಿಸಿದ್ದಾರೆ.

ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಹನುಮಂತ ನಿರಾಣಿ ಗೆಲುವು ಸಾಧಿಸಿದ್ದಾರೆ.

 

 

ಕರ್ನಾಟಕ ವಾಯವ್ಯ ಶಿಕ್ಷಕರ ಮತಕ್ಷೇತ್ರದ ವಿವರ:

ಕರ್ನಾಟಕ ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಕಾಶ ಹುಕ್ಕೇರಿ ಅವರು 11,460 ಪ್ರಥಮ ಪ್ರಾಶಸ್ತ್ಯ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
ಅವರ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ‌ ಅಭ್ಯರ್ಥಿ ಅರುಣ ಶಹಾಪೂರ ಅವರು 6,405 ಮತಗಳನ್ನು ಪಡೆದುಕೊಂಡಿದ್ದಾರೆ.

ವಾಯವ್ಯ ಶಿಕ್ಷಕರ ಮತಕ್ಷೇತ್ರದಲ್ಲಿ ಒಟ್ಟು 21,402 ಮತಗಳು ಚಲಾವಣೆಯಾಗಿದ್ದು, ಅದರಲ್ಲಿ 1,270 ಮತಗಳು ಅಸಿಂಧುವಾಗಿವೆ ಮತ್ತು 20,132 ಸಿಂಧು ಮತಗಳಿದ್ದವು.
ಅಭ್ಯರ್ಥಿ ಗೆಲುವಿಗೆ 10,067 ಮತಗಳ ಕೋಟಾ ನಿಗದಿಪಡಿಸಲಾಗಿತ್ತು.

ಅಭ್ಯರ್ಥಿಗಳು ಪಡೆದ ಮತಗಳ ವಿವರ:

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಪ್ರಕಾಶ ಹುಕ್ಕೇರಿ, 11460 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಅರುಣ ಶಹಾಪೂರ ಅವರು 6405 ಮತಗಳನ್ನು ಪಡೆದಿದ್ದಾರೆ.

ಜೆಡಿಎಸ್ ಪಕ್ಷದ ಅಭ್ಯರ್ಥಿ ಚಂದ್ರಶೇಖರ ಲೋಣಿ 544 ಮತಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ಅಪ್ಪಾಸಾಹೇಬ ಕುರಣೆ- 9, ಚಂದ್ರಶೇಖರ ಗುಡಸೆ- 101, ದೇಸಾಯಿ ಜಯಪಾಲ ರಾಜಾರಾಮ- 10, ಬನ್ನೂರು ಎನ್. ಬಿ -1009, ಬಸಪ್ಪ ಮಣಿಗಾರ -39, ಶ್ರೀಕಾಂತ ಪಾಟೀಲ- 19, ಶ್ರೀನಿವಾಸಗೌಡ ಗೌಡರ- 524, ಶ್ರೇನಿಕ್ ಅಣ್ಣಾಸಾಹೇಬ್ ಜಂಗಟೆ -8 ಹಾಗೂ ಚಿಕ್ಕನಾರಗುಂದ ಸಂಗಮೇಶ- 4 ಮತಗಳನ್ನು ಪಡೆದಿದ್ದಾರೆ.

ಕರ್ನಾಟಕ ಪಶ್ಚಿಮ‌ ಶಿಕ್ಷಕರ ಮತಕ್ಷೇತ್ರದ ವಿವರ:

ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ಬಸವರಾಜ ಹೊರಟ್ಟಿ ಅವರು 9266 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಬಸವರಾಜ ಗುರಿಕಾರ ಅವರು 4597 ಮತಗಳನ್ನು ಪಡೆದುಕೊಂಡರು.
ಒಟ್ಟು 15,583 ಮತಗಳು‌ ಚಲಾವಣೆಗೊಂಡಿದ್ದು, ಅದರಲ್ಲಿ 1,223 ಮತಗಳು ಅಸಿಂಧುವಾಗಿವೆ ಮತ್ತು 14,360 ಸಿಂಧು ಮತಗಳಿದ್ದವು. ಗೆಲುವಿನ ಕೋಟಾ 7,181 ನಿಗದಿಪಡಿಸಲಾಗಿತ್ತು.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ