Breaking News

ಟಿಳಕವಾಡಿಯಲ್ಲಿ ಡ್ರೈನೇಜ್ ಸಮಸ್ಯೆ

Spread the love

ಬೆಳಗಾವಿಯ ಟಿಳಕವಾಡಿಯ ಬುಧವಾರ ಪೇಟ ಹಾಗೂ ಗುರುವಾರ ಪೇಟಗಳಲ್ಲಿ ಸಾರ್ವಜನಿಕರಿಗೆ ಡ್ರೈನೇಜ್ ಪೈಪ್‍ಲೈನ್ ಸಮಸ್ಯೆಯಿಂದಾಗಿ ಸಾಕಷ್ಟು ತೊಂದರೆಯಾಗಿತ್ತು. ಈ ಸಮಸ್ಯೆಗಳನ್ನು ಅರಿತ ನಗರಸೇವಕರಾದ ನಿತಿನ್ ಜಾಧವ್ ಕೂಡಲೇ ಸಮಸ್ಯೆಯನ್ನು ಪರಿಹರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ನಗರದ ಟಿಳಕವಾಡಿಯ ಬುಧವಾರ ಪೇಟ ಹಾಗೂ ಗುರುವಾರ ಪೇಟಗಳಲ್ಲಿ ಡ್ರೈನೇಜ್ ಪೈಪ್‍ಲೈನ್ ಬ್ಲಾಕ್ ಆಗಿ ಅಕ್ಕಪಕ್ಕದ ಮನೆಯಗಳ ಬಾವಿಯಲ್ಲಿ ಈ ಡ್ರೈನೇಜ್ ನೀರು ಸೇರುತ್ತಿತ್ತು. ಈ ಕುರಿತಂತೆ ಸ್ಥಳೀಯರು ನಗರ ಸೇವಕರಾದ ನಿತಿನ್ ಜಾಧವ್‍ರವರಿಗೆ ತಿಳಿಸಿದ್ದರು. ಈ ಕುರಿತಂತೆ ನಿತಿನ್ ಜಾಧವ್ ಬೆಳಗಾವಿಯ ದಕ್ಷಿಣ ಶಾಸಕರಾದ ಅಭಯ್ ಪಾಟೀಲ್ ರವರಿಗೆ ತಿಳಿಸಿದ್ದರು.

ಶಾಸಕರು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಕೂಡಲೇ ಡ್ರೈನೇಜ್ ಪೈಪ್‍ನ್ನು ಬದಲಾಯಿಸುವಂತೆ ಅಧಿಕಾರಿಗಳಿಗೆ ತಿಳಿಸಿ ಕಾಮಗಾರಿಯನ್ನು ಪ್ರಾರಂಭಿಸಿದರು. ಕಾರ್ಯವನ್ನು ತ್ವರಿತವಾಗಿ ಪ್ರಾರಂಭಿಸಿದ್ದಕ್ಕೆ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದರು.


Spread the love

About Laxminews 24x7

Check Also

ಡಿಸೆಂಬರ 31 ಒಳಗಾಗಿ ಬೆಳಗಾವಿ ಜಿಲ್ಲೆ ವಿಭಜಿಸಿ,.

Spread the love ಡಿಸೆಂಬರ 31 ಒಳಗಾಗಿ ಬೆಳಗಾವಿ ಜಿಲ್ಲೆ ವಿಭಜಿಸಿ,. ಚಿಕ್ಕೋಡಿ: ಆಡಳಿತಾತ್ಮಕ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಡಿಸೆಂಬ‌ರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ