ವಾಯುವ್ಯ ಶಿಕ್ಷಕರ ಹಾಗೂ ಪದವೀಧರ ಚುನಾವಣೆಯ ಮತದಾರರಿಗೆ ಹಣ ಹಂಚಲು ಹೊರಟಿದ್ದ ವಾಹನ ವಿಜಯಪುರ ನಗರದ ಗೋದಾವರಿ ಬಾರ್ ಬಳಿ ಚುನಾವಣೆ ಅಧಿಕಾರಿಗಳಿಗೆ ಸಿಕ್ಕಿದೆ.
ವಾಹನದಲ್ಲಿ ಹಣ ತೆಗೆದುಕೊಂಡು ಹೋಗುತ್ತಿರುವಾಗ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಪರ ಹಣ ಹಂಚಿಕೆದಾರರು ಸಿಕ್ಕಿ ಬಿದ್ದಿದ್ದಾರೆ. ಒಟ್ಟು 1.70 ಲಕ್ಷ ರೂ.ಪತ್ತೆಯಾಗಿದ್ದು, ಒಂದೊಂದು ಪಾಕಿಟ್ ನಲ್ಲೂ10 ಸಾವಿರ ರೂ.ಸಿಕ್ಕಿದೆ.
ಸೋಮವಾರ ನಡೆಯಲಿರುವ ವಿಧಾನ ಪರಿಷತ್ತಿನ ವಾಯವ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಯ ಮತದಾರರಿಗೆ ಹಂಚಲು ಹೊರಟಿದ್ದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದು, 17.40 ಲಕ್ಷ ರೂ. ಹಣ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ….
Laxmi News 24×7