ಮಂಡ್ಯ: ನಾಳೆ 2 ಪದವೀಧ ಹಾಗೂ 2 ಶಿಕ್ಷಕರ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮತದಾರರನ್ನು ಓಲೈಸಿಕೊಳ್ಳೋದಕ್ಕಾಗಿ, ಅಭ್ಯರ್ಥಿಗಳು ಹಣ, ಹೆಂಡದ ಹೊಳೆಯನ್ನೇ ಹರಿಸುತ್ತಿರೋದಾಗಿ ತಿಳಿದು ಬಂದಿದೆ. ಮಂಡ್ಯದಲ್ಲಿ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ಮತದಾರರಿಗೆ 2000 ಸಾವಿರ ರೂ ಹಂಚಿಕೆ ಮಾಡಿರೋದಾಗಿ ತಿಳಿದು ಬಂದಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಪದವೀಧರ ಚುನಾವಣೆಯ ಮತದಾರರಿಗೆ ರೂ.2000 ಹಣವನ್ನು ಕವರ್ ನಲ್ಲಿ ಇರಿಸಿ, ಮತದಾರರಿಗೆ ಹಂಚಿದಂತ ವೀಡಿಯೋ, ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.