ವಾಯುವ್ಯ ಶಿಕ್ಷಕರ ಚುನಾವಣೆ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿರುವ ಬ್ಲಾಕ್ ಕಾಂಗ್ರೆಸ್ ಕಛೇರಿ ಆವರಣದಲ್ಲಿ ಭರ್ಜರಿ ಎಣ್ಣೆ ಪಾರ್ಟಿ ಮಾಡಿರುವ ಘಟನೆ ನಡೆದಿದೆ.
ಚಿಕ್ಕೋಡಿ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭರ್ಜರಿ ಪಾರ್ಟಿ ಕೊಟ್ಟಿದ್ದಾರೆ. ಕಛೇರಿ ಬೋರ್ಡ್‍ಗೆ ಬಟ್ಟೆ ಕಟ್ಟಿ ಬೋರ್ಡ್ ಮುಚ್ಚಿ ಪಾರ್ಟಿ ಆಯೋಜನೆ ಮಾಡಲಾಗಿದೆ. ನೂರಾರು ಶಿಕ್ಷಕರನ್ನ ಕಛೇರಿಗೆ ಕರೆಸಿ ಪ್ರಕಾಶ ಹುಕ್ಕೇರಿ ಎಣ್ಣೆ ಪಾರ್ಟಿ ಕೊಡುವ ಮೂಲಕ ಮತದಾರರಿಗೆ ಆಮಿಷವೊಡ್ಡಿದ್ದಾರೆ.
ತಾಲೂಕಾಡಳಿತ ಪಕ್ಕದಲ್ಲೇ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆದರು ತಾಲೂಕಾಡಳಿತ ಕಣ್ಮುಚ್ಚಿ ಕುಳಿತಿದೆ. ಪ್ರಕಾಶ ಹುಕ್ಕೇರಿ ಪ್ರಭಾವಕ್ಕೆ ಮಣಿದು ಮೂಕರಾದ್ರಾ ಚುನಾವಣಾ ಸಿಬ್ಬಂದಿ ಎಂಬ ಪ್ರಶ್ನೆ ಮೂಡಿದೆ. ಉಪ ವಿಭಾಗಾಧಿಕಾರಿ ಕಛೇರಿಗೆ ಹೊಂದಿಕೊಂಡು ಇರುವ ಕಾಂಗ್ರೆಸ್ ಬ್ಲಾಕ್ ಕಛೇರಿಯಲ್ಲಿಯೇ ಈ ರೀತಿ ಭರ್ಜರಿ ಪಾರ್ಟಿ ನಡೆದಿದೆ.