ಶ್ರೀ ಶಿವಪ್ರತಿಷ್ಠಾನ ಹಿಂದೂಸ್ಥಾನ ಬೆಳಗಾವಿಯ ವತಿಯಿಮದ ಪ್ರತಿವರ್ಷದಂತೆ ಈ ಬಾರಿಯೂ ಜ್ಯೇಷ್ಠ ಶುದ್ಧ ತ್ರಯೋದಶಿ ಶಕೆ ೧೯೪೪ ಹಿಂದೂ ತಿಥಿಯನುಸಾರ ಶಿವರಾಜ್ಯಾಭಿಷೇಕ ಮಾಡಲಾಯಿತು.
ಪ್ರೇರಣಾ ಮಂತ್ರದೊಂದಿಗೆ ಶಿವಾಜಿ ಮಹಾರಾಜರ ಮೂರ್ತಿಗೆ ವಿಧಿವತ್ತ ಕ್ಷೀರಾಭಿಷೇಕ, ಜಲಾಭಿಷೇಕ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಶಿರೀಷ್ ಗೋಗಟೆ ಮತ್ತು ಶ್ರೀ ಶಿವಪ್ರತಿಷ್ಠಾನ ಹಿಂದೂಸ್ಥಾನನ ಜಿಲ್ಲಾ ಪ್ರಮುಖ ಕಿರಣ ಗಾವಡೆ ಅವರು ಶಿವಾಜೀ ಮಹಾರಾಜರ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಂತರ ಮಹಾಆರತಿ ನಡೆಯಿತು. ನಂತರ ದೇವದರ್ಶನ ಯಾತ್ರೆ ನಡೆಯಿತು.
ಈ ವೇಳೆ ಶಿರೀಷ್ ಗೋಗಟೆ ಮತ್ತು ಹ.ಭ.ಪ ಬಾಳೂ ಭಕ್ತಿಕರ ಮಹಾರಾಜರ ಹಸ್ತದಿಂದ ಧ್ವಜಾರೋಹಣ ಮಾಡಲಾಯಿತು. ದೀಪಕ ಪವಾರ್ ಅವರು ಧ್ವಜ ಪೂಜೆ ಸಲ್ಲಿಸಿದರು. ವಾರಕರಿ ಸಂಪ್ರದದಾಯದಂತೆ ಪಲ್ಲಕ್ಕಿಯಲ್ಲಿ ಛತ್ರಪತಿ ಶಿವಾಜೀ ಮಹಾರಾಜರ ಮೂರ್ತಿ ಮತ್ತು ಶಿವಚರಿತ್ರ ಗ್ರಂಥವನ್ನಿಟ್ಟು ದೇವದರ್ಶನ ಯಾತ್ರೆ ಆರಂಭಗೊಂಡಿತು.
ಧ್ವಜಪಥಕ, ಅಶ್ವಪಥಕ, ಲೇಝಿಮ್ ಸೇರಿದಂತೆ ಪಾರಂಪರೀಕ ಪಥಕಗಳು ಯಾತ್ರೆಯಲ್ಲಿ ಭಾಗಿಯಾಗಿದ್ದರು. ಶೋಭಾಯಾತ್ರೆಯಲ್ಲಿ ಶಿವಕಾಲೀನ ಇತಿಹಾಸವನ್ನು ದರ್ಶಿಸುವ ಕಲೆಗಳ ಪ್ರದರ್ಶನ ನಡೆಯಿತು.