ಯಾದಗಿರಿ ಜಿಲ್ಲೆಯಲ್ಲಿ ಈವರೆಗೆ ಯಾವುದೇ ಕೊರೊನಾ ಸೋಂಕು ಪತ್ತೆಯಾಗಿರಲಿಲ್ಲ. ಹೀಗಾಗಿ ಗ್ರೀನ್ಜೋನ್ ಎಂದು ಘೋಷಿಸಾಲಾಗಿತ್ತು. ಇದೀಗ ಯಾದಗಿರಿಗೆ ಕೊರೊನಾ ಆತಂಕ ಎದುರಾಗಿದೆ.
ಲಾಕ್ಡೌನ್ ಸಡಲಿಕೆ ಎಫೆಕ್ಟ್ ನಿಂದಾಗಿ ಯಾದಿಗಿರಿಗೆ ಬಂದು ಹೋಗಿದ್ದ ಕಲಬುರಗಿ ಸೋಂಕಿತನಿಂದ ಇದೀಗ ಜಿಲ್ಲಾಡಳಿತ ಸಂಕಷ್ಟಕ್ಕೀಡಾಗಿದೆ. ಏಪ್ರಿಲ್ 21 ರಂದು ರೋಗಿ 413 ಕಲಬುರಗಿ ವ್ಯಕ್ತಿಗೆ ಕೊರಾನಾ ದೃಢಪಟ್ಟಿದೆ. ಇತನ ಟ್ರಾವೆಲ್ ಹಿಸ್ಟರಿಯಲ್ಲಿ ಹೊರ ಬಿದ್ದರುವ ಸತ್ಯ ಯಾದಗಿರಿ ಜನರ ನಿದ್ದೆಗೆಡಿಸಿದೆ.
ಪಾಸಿಟಿವ್ ಬಂದ ವ್ಯಕ್ತಿಗೆ ಯಾದಗಿರಿ ನಗರದಲ್ಲಿ ಕನ್ನಡಕದ ಅಂಗಡಿಯಿದ್ದು, ಈ ಅಂಗಡಿ ಏಪ್ರಿಲ್ 15 ರಿಂದ 22ವರೆಗೆ ತೆರೆದಿತ್ತು. ಈತನಿಗೆ ಕೊರೊನಾ ಸೋಂಕು ಇರುವುದು ಗೊತ್ತಾಗಿದ್ದರೂ ಯಾದಗಿರಿ ಜೊತೆ ನಿಕಟ ಸಂಪರ್ಕ ಹೊಂದಿದ್ದ. ಅಲ್ಲದೆ ಕಲಬುರಗಿಯಿಂದ ಯಾದಗಿರಿಗೆ ದಿನಾಲೂ ಸಂಚಾರ ಮಾಡಿದ್ದ.
Laxmi News 24×7