ಬೆಳಗಾವಿ: ಜೆಲ್ಲೆಯ ಸವದತ್ತಿ, ಬೈಲಹೊಂಗಲ, ಯರಗಟ್ಟಿ ತಾಲ್ಲೂಕಿನ ಬಹುಪಾಲು ಹಳ್ಳಿಗಳಲ್ಲಿ ಭಾನುವಾರ ಮಧ್ಯಾಹ್ನ ಧಾರಾಕಾರ ಮಳೆ ಸುರಿಯಿತು.
ಮಧ್ಯಾಹ್ನ 3.30ರ ಸುಮಾರಿಗೆ ಆರಂಭವಾದ ಮಳೆ, ಒಂದು ತಾಸಿಗೂ ಹೆಚ್ಚು ಸಮಯ ನಿರಂತರವಾಗಿ ಸುರಿಯಿತು.
ಯರಗಟ್ಟಿಯಿಂದ ಬೈಲಹೊಂಗಲ ತಾಲ್ಲೂಕಿನ ನೇಸರಗಿವರೆಗೆ ಬಿರುಗಾಳಿ, ಗುಡುಗಿನ ಸದ್ದು ಜೋರಾಗಿತ್ತು.
ಮಳೆಯ ಆರ್ಭಟದಿಂದಾಗಿ ಬೆಳಗಾವಿ-ಬಾಗಲಕೋಟೆ ರಾಜ್ಯ ಹೆದ್ದಾರಿಯ ಮೇಲೆ ವಾಹನ ಸವಾರರು ವಾಹನಗಳ ಹೆಡ್‌ಲೈಟ್ ಆನ್ ಮಾಡಿ ಸಂಚರಿಸಿದರು.
Laxmi News 24×7