ಬೆಳಗಾವಿ ತಾಲೂಕಿನ ಅರಳೀಕಟ್ಟಿ ಗ್ರಾಮದ ಶ್ರೀ ತೋಂಟದಾರ್ಯ ವಿರಕ್ತ ಮಠದ ಶ್ರೀ ಮ. ನಿ. ಪ್ರ ಶ್ರೀ ಶಿವಮೂರ್ತಿ ಮಹಾಸ್ವಾಮಿಗಳ ಮೌನಾನುಷ್ಠಾನ ಮಂಗಲ ಸಮಾರಂಭದಲ್ಲಿ ಭಾಗಿಯಾಗಿ ಎಲ್ಲ ಶ್ರೀಗಳ ಆಶೀರ್ವಾದ ಪಡೆದು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ.
ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀ ಮ.ನಿ.ಪ್ರ.ಸ್ವ ನೀಲಕಂಠ ಮಹಾಸ್ವಾಮಿಗಳು ಶ್ರೀ ದುರದುಂಡೇಶ್ವರಮಠ ಮುರಗೋಡ ಹಾಗೂ ಸಮಾರಂಭದ ಅಧ್ಯಕ್ಷತೆಯನ್ನು ಬೆಳಗಾವಿಯ ರುದ್ರಾಕ್ಷಿಮಠದ ಶ್ರೀ ಮ.ನಿ.ಪ್ರ.ಸ್ವ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ವಹಿಸಿದ್ದರು.
ಈ ಸಂದರ್ಭದಲ್ಲಿ ಹುಕ್ಕೇರಿ ವೀರಕ್ತಮಠದ ಶ್ರೀ ಮ.ನಿ.ಪ್ರ.ಸ್ವ
ಶಿವಬಸವ ಮಹಾಸ್ವಾಮಿಗಳು, ಕುಂದರಗಿ ಅಡವಿಸಿದ್ದೇಶ್ವರ ಮಠ ಶ್ರೀ ಮ.ನಿ.ಪ್ರ.ಸ್ವ ಅಮರಸಿದ್ದೇಶ್ವರ ಮಹಾಸ್ವಾಮಿಗಳು, ಮುತ್ನಾಳ ಕೇದಾರ ಶಾಖಾ ಮಠದ ಶ್ರೀ ಷ ಬ್ರ ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ಅರಳೀಕಟ್ಟಿ ವಿರಕ್ತಮಠದ ಶ್ರೀ ಮ.ನಿ.ಪ್ರ.ಸ್ವ ಶಿವಮೂರ್ತಿ ಮಹಾಸ್ವಾಮಿಗಳು, ದೇವರಶೀಗಿಹಳ್ಳಿಯ ಶ್ರೀ ಮ.ನಿ.ಪ್ರ.ಸ್ವ ವೀರೇಶ್ವರ ಮಹಾಸ್ವಾಮಿಗಳು, ನರಗುಂದ ವಿರಕ್ತಮಠದ ಶ್ರೀ ಮ.ನಿ.ಪ್ರ.ಸ್ವ ಶಿವಕುಮಾರ ಮಹಾಸ್ವಾಮಿಗಳು, ಬೆಳಗಾವಿ ಕಾರಂಜಿಮಠದ ಪೂಜ್ಯ ಶ್ರೀ ಶಿವಯೋಗಿ ದೇವರು, ತಾರೀಹಾಳ ಅಡವಿಸಿದ್ದೇಶ್ವರಮಠದ ಪೂಜ್ಯ ಶ್ರೀ ಅಡವೀಶ ದೇವರು, ಘಟಪ್ರಭಾದ ಪೂಜ್ಯ ಶ್ರೀ ಶಿವಾನಂದ ದೇವರು ಉಪಸ್ಥಿತರಿದ್ದರು.