Breaking News
Home / ರಾಜಕೀಯ / ಯಾರಿಗೆ ಬೇಕು ಎಷ್ಟು ವೋಟು: ರಾಜ್ಯಸಭಾ ಚುನಾವಣೆಗೆ ಮತ ಲೆಕ್ಕಾಚಾರ ಹೇಗಿದೆ?

ಯಾರಿಗೆ ಬೇಕು ಎಷ್ಟು ವೋಟು: ರಾಜ್ಯಸಭಾ ಚುನಾವಣೆಗೆ ಮತ ಲೆಕ್ಕಾಚಾರ ಹೇಗಿದೆ?

Spread the love

ಬೆಂಗಳೂರು: ಬದಲಾದ ರಾಜಕೀಯ ಲೆಕ್ಕಾಚಾರದಲ್ಲಿ ರಾಜ್ಯಸಭೆಯ ನಾಲ್ಕನೇ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಮೂರು ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸಿದೆ.

ಕಾಂಗ್ರೆಸ್- ಬಿಜೆಪಿ ಬೆಂಬಲದ ನಿರೀಕ್ಷೆಯಿಂದ ಜೆಡಿಎಸ್ ಆರಂಭದಲ್ಲಿ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಸಿತ್ತು.

ಆದರೆ ಜೆಡಿಎಸ್ ಲೆಕ್ಕಾಚಾರವನ್ನು ತಲೆಕೆಳಗು ಮಾಡಿ ಕಾಂಗ್ರೆಸ್ ತಾವೂ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಮನ್ಸೂರ್ ಅಲಿ ಖಾನ್ ಅವರು ಕಾಂಗ್ರೆಸ್ ಎರಡನೇ ಅಭ್ಯರ್ಥಿಯಾಗಿದ್ದಾರೆ.

 

ಇದರ ನಡುವೆ ನಾಲ್ಕನೇ ಸ್ಥಾನಕ್ಕಾಗಿ ಬಿಜೆಪಿಯೂ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಪಕ್ಷದ ಮುಖಂಡ ಲೆಹರ್ ಸಿಂಗ್ ಸಿರೋಯಾ ಅವರನ್ನು ತನ್ನ ಮೂರನೇ ಅಭ್ಯರ್ಥಿಯನ್ನಾಗಿಸಿದೆ. ಹೀಗಾಗಿ ನಾಲ್ಕನೇ ಅಭ್ಯರ್ಥಿಯ ಆಯ್ಕೆ ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಮತ ಲೆಕ್ಕಾಚಾರ ಹೇಗೆ

ರಾಜ್ಯಸಭೆ ಚುನಾವಣೆಗೆ ಮತ ಹಾಕುವವರು ವಿಧಾನಸಭೆ ಶಾಸಕರ. ಇವರ ಸಂಖ್ಯಾಬಲದ ಆಧಾರದ ಮೇಲೆ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಾರೆ.

ಚುನಾವಣೆ ಗೆಲ್ಲಲು ಪ್ರತಿ ಅಭ್ಯರ್ಥಿಗೆ 45 ಮತಗಳ ಅಗತ್ಯವಿದೆ.

ಬಿಜೆಪಿ ವಿಧಾನಸಭೆಯಲ್ಲಿ 121 ಸಂಖ್ಯಾಬಲ ಹೊಂದಿದ್ದು, ಮೊದಲೆರಡು ಅಭ್ಯರ್ಥಿಗಳಿಗೆ ಚಲಾವಣೆಯಾದ ಬಳಿಕ 32 ಮತಗಳು ಬಾಕಿ ಉಳಿಯುತ್ತದೆ.

ಕಾಂಗ್ರೆಸ್ ಬಳಿ 70 ಮತಗಳಿವೆ. ಜೈರಾಮ್ ರಮೇಶ್ ಗೆ ಚಲಾವಣೆಯಾದ ಬಳಿಕ ಎರಡನೇ ಅಭ್ಯರ್ಥಿಗೆ 25 ಮತಗಳಷ್ಟೇ ಉಳಿಕೆಯಾಗುತ್ತದೆ

ಜೆಡಿಎಸ್ ಬಳಿ ಇರುವುದು ಕೇವಲ 32 ಮತಗಳು. ಕುಪೇಂದ್ರ ರೆಡ್ಡಿ ಗೆಲುವಿಗೆ ಇನ್ನೂ 13 ಮತಗಳ ಅವಶ್ಯಕತೆಯಿದೆ. ಹೀಗಾಗಿ ಅವರಿಗೆ ಇತರರ ಸಹಾಯ ಅಗತ್ಯ.

ಚುನಾವಣೆಯಲ್ಲಿ ಒಂದು ವೇಳೆ ಅಡ್ಡಮತದಾನ ನಡೆಯದೇ, ಮೊದಲ ಪ್ರಾಶಸ್ತ್ಯದಲ್ಲಿ ಫಲಿತಾಂಶ ಬರದಿದ್ದರೆ, ಎರಡನೇ ಪ್ರಾಶಸ್ತ್ಯದ ಮತದಾನ ನಡೆಯಲಿದೆ. ಆಗ ಹೆಚ್ಚು ಮತ ಹೊಂದಿರುವ ಬಿಜೆಪಿ ಗೆಲುವು ಸಾಧ್ಯ ಎನ್ನುವುದು ಲೆಕ್ಕಾಚಾರ


Spread the love

About Laxminews 24x7

Check Also

ಮಾಜಿ ಪ್ರಧಾನಿಗಳ ಮೊಮ್ಮಗ, ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡು : ಡಿಕೆಶಿ

Spread the loveಬೆಂಗಳೂರು,ಏ.28- ತಲೆ ತಗ್ಗಿಸುವ ಕೆಲಸ ಮಾಡಿ ಮಾಜಿ ಪ್ರಧಾನಿಗಳ ಮೊಮ್ಮಗ ಹಾಗೂ ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ