ಬೆಂಗಳೂರು, ಮೇ 20: ಮಳೆಯಿಂದ ಹಾನಿಯಾಗಿರುವ ರಾಜಧಾನಿಯ ವಿವಿಧ ಭಾಗಗಳಿಗೆ ಭೇಟಿ ನೀಡುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ, ಹೈಕಮಾಂಡ್ ನಿಂದ ತುರ್ತು ಬುಲಾವ್ ಬಂದಿದೆ. ಇಂದು ಮಧ್ಯಾಹ್ನದ ನಂತರ ಸಿಎಂ ದೆಹಲಿಗೆ ಹೊರಡಲಿದ್ದಾರೆ ಎಂದು ವರದಿಯಾಗಿದೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರ ಕಚೇರಿಯಿಂದಲೇ ದೂರವಾಣಿ ಕರೆ ಬಂದಿದ್ದು, ಇಂದು ಸಂಜೆ ನಡ್ಡಾ ಅವರನ್ನು ಸಿಎಂ ಬೊಮ್ಮಾಯಿ ಭೇಟಿಯಾಗುವ ಸಾಧ್ಯತೆಯಿದೆ. ಜೊತೆಗೆ, ಅಪಾಯಿಂಟ್ಮೆಂಟ್ ಸಿಕ್ಕಿದರೆ ಅಮಿತ್ ಶಾ ಅವರನ್ನೂ ಬೊಮ್ಮಾಯಿ ಭೇಟಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮಳೆಯಿಂದಾಗಿ ಆಗಿರುವ ಅನಾಹುತವನ್ನು ಸಿಎಂ ಸತತವಾಗಿ ವೀಕ್ಷಣೆ

ಮುಖ್ಯಮಂತ್ರಿಗಳ ಐದು ದಿನಗಳ ವಿದೇಶ ಪ್ರವಾಸಕ್ಕೆ ಮುನ್ನ ಅವರನ್ನು ಹೈಕಮಾಂಡ್ ಕರೆಸಿಕೊಳ್ಳುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
Laxmi News 24×7