Breaking News

ಬಡತನದಲ್ಲಿ ಉತ್ತಮ ಅಂಕ ಪಡೆದ ಅಮಿತ್

Spread the love

ವಿಜಯಪುರ: ರಾಜ್ಯದ ಎಸ್‌ಎಸ್‌ಎಲ್‌ಸಿ (SSLC) ವಿದ್ಯಾರ್ಥಿಗಳ (Students) ಪರೀಕ್ಷಾ ಫಲಿತಾಂಶ (Exam Result) ಪ್ರಕಟಗೊಂಡಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ (Education Minister) ಬಿ.ಸಿ. ನಾಗೇಶ್ (B.C. Nagesh) ಫಲಿತಾಂಶ ಪ್ರಕಟಿಸಿದ್ದಾರೆ.

ಈ ಬಾರಿ ಶೇ.85.63ರಷ್ಟು ವಿದ್ಯಾರ್ಥಿಗಳು (Students) ಉತ್ತೀರ್ಣರಾಗಿದ್ದಾರೆ. ಈ ಬಾರಿಯೂ ಬಾಲಕಿಯರೇ (Girls) ಮೇಲುಗೈ ಸಾಧಿಸಿದ್ದಾರೆ. ಶೇ. 90.29ರಷ್ಟು ಬಾಲಕಿಯರು, ಶೇ. 81.30ರಷ್ಟು ಬಾಲಕರು (Boys) ಪಾಸ್ (Pass) ಆಗಿದ್ದಾರೆ. ಒಟ್ಟೂ 7,30,881 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ 40,061 ಮಂದಿ ಗ್ರೇಸ್ ಮಾರ್ಕ್ (Grace Marks)ಮೂಲಕ ಪಾಸ್ ಆಗಿದ್ದಾರೆ. ವಿಜಯಪುರದ (Vijayapur) ವಿದ್ಯಾರ್ಥಿ ಅಮಿತ್ ಮಾದರ್ (Amit Madar) ಟಾಪರ್ (Toper) ಆಗಿ ಹೊರ ಹೊಮ್ಮಿದ್ದಾನೆ. ಬಡತನದಲ್ಲೇ ಬೆಳೆದ ಗ್ರಾಮೀಣ ಪ್ರತಿಭೆ ಈಗ ರಾಜ್ಯದ ಜನರ ಗಮನ ಸೆಳೆದಿದೆ. ಈ ವಿದ್ಯಾರ್ಥಿಯ ಸಾಧನೆಯ ಹೆಜ್ಜೆ ಗುರುತು ಇಲ್ಲಿದೆ ನೋಡಿ.

ಎಸ್‌ಎಸ್‌ಎಲ್‌ಸಿಯಲ್ಲಿ ವಿಜಯಪುರದ ವಿದ್ಯಾರ್ಥಿ ಸಾಧನೆ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಪರೀಕ್ಷೆಯಲ್ಲಿ ವಿಜಯಪುರದ ವಿದ್ಯಾರ್ಥಿ ಸಾಧನೆ ಮಾಡಿ, ಮಾದರಿಯಾಗಿದ್ದಾನೆ. ವಿಜಯಪುರ ತಾಲುಕಿನ ‌ಜುಮನಾಳ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿ ಅಮಿತ್ ಮಾದರ್ ಟಾಪರ್ ಆಗಿ ಹೊರಹೊಮ್ಮಿದ್ದಾನೆ.


Spread the love

About Laxminews 24x7

Check Also

ವಿಜಯಪುರ ಡಿಸಿಯಾಗಿ ಡಾ. ಆನಂದ.ಕೆ ವರ್ಗಾವಣೆ

Spread the love ವಿಜಯಪುರ ಡಿಸಿಯಾಗಿ ಡಾ. ಆನಂದ.ಕೆ ವರ್ಗಾವಣೆ ವಿಜಯಪುರ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರನ್ನು ರಾಜ್ಯ ಸರ್ಕಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ