Breaking News

ಲಾಡ್ಜ್ ನಲ್ಲಿ ದಾಖಲೆ ಇಲ್ಲದ ಅಪಾರ ಪ್ರಮಾಣದ ನಗದು ಇರುವ ಬ್ಯಾಗ್ ಪತ್ತೆ..!

Spread the love

ಹಾವೇರಿ : ಹಾವೇರಿನಗರದ ಶಿವಶಕ್ತಿ ಪ್ಯಾಲೆಸ್ ಲಾಡ್ಜ್ ‌ ನಲ್ಲಿ ದಾಖಲೆ ಇಲ್ಲದ 58 ಲಕ್ಷ ರೂ ಹಣ ಪತ್ತೆಯಾಗಿದೆ . ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ಮಾಡಿ ಪೊಲೀಸರು ದಾಖಲೆ ಇಲ್ಲದ ಹಣ ಇಟ್ಟುಕೊಂಡಿದ್ದ ನಾಲ್ವರನ್ನು ವಶಕ್ಕೆ ಪಡೆದು ತನಿಖೆಯನ್ನ ಆರಂಭಿಸಿದ್ದಾರೆ . ಯಾವುದೋ ಅಕ್ರಮ ಎಸಗುವ ಉದ್ದೇಶದಿಂದ ಆರೋಪಿಗಳು ಸೂಕ್ತ ದಾಖಲೆಗಳಿಲ್ಲದ ಹಣ ಇಟ್ಟುಕೊಂಡಿದ್ರು ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ .

ಬಂಧಿತ ಅರೋಪಿಗಳನ್ನ ರವಿ , ಗಣಪತಿ , ಅನಿಲ್ , ಚನ್ನಪ್ಪ ಅಂತ ಗುರುತಿಸಲಾಗಿದೆ . ಮೂವರು ಆರೋಪಿಗಳು ಬೆಳಗಾವಿ ಮೂಲದವರು , ಒಬ್ಬ ಬೆಂಗಳೂರಿನ ಕೆಂಗೇರಿಯವನು ಅಂತ ತಿಳಿದು ಬಂದಿದೆ . 58 ಲಕ್ಷ ರೂ . ಹಣ , ಹಣ ಎಣಿಸುವ ಎಲೆಕ್ಟ್ರಾನಿಕ್ ಯಂತ್ರ ವಶಕ್ಕೆ ಪಡೆದಿರೋ ಪೊಲೀಸರು , ವಿಚಾರಣೆ ನಡೆಸಿದ್ದಾರೆ . ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿರೋ ಪೊಲೀಸರು ಈ ಕುರಿತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ರವಾನಿಸಿದ್ದಾರೆ .


Spread the love

About Laxminews 24x7

Check Also

2 ವರ್ಷಗಳಿಂದ ಆರಂಭವಾಗದ ಶುದ್ಧ ನೀರಿನ ಘಟಕಗಳು

Spread the loveಹಾವೇರಿ: ನಗರದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಸಿಗಲಿ ಎಂದು ಶಾಸಕರ ಅನುದಾನದಲ್ಲಿ ಆರು ಶುದ್ಧ ಕುಡಿಯುವ ನೀರಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ