Breaking News

ನನ್ನನ್ನು ತಿಹಾರ್ ಜೈಲಿಗಾದ್ರೂ ಹಾಕಲಿ, ಪರಪ್ಪನ ಆಗ್ರಹಾರಕ್ಕಾದ್ರೂ ಹಾಕಲಿ. ನಾನು ಹೆದರುವುದಿಲ್ಲ:D.K.

Spread the love

ಶಿವಮೊಗ್ಗ: ನನ್ನನ್ನು ತಿಹಾರ್ ಜೈಲಿಗಾದ್ರೂ ಹಾಕಲಿ, ಪರಪ್ಪನ ಆಗ್ರಹಾರಕ್ಕಾದ್ರೂ ಹಾಕಲಿ. ನಾನು ಹೆದರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಸಚಿವ ಡಾ.ಸಿ ಎನ್ ಅಶ್ವತ್ಥ್​ ನಾರಾಯಣ ಅವರಿ​ಗೆ ತಿರುಗೇಟು ನೀಡಿದ್ದಾರೆ. ಶಿವಮೊಗ್ಗದ ಜನಧ್ವನಿ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೂಂದಿಗೆ ಮಾತನಾಡಿದ ಅವರು, ಯಾವ ಜೈಲಿಗಾದ್ರೂ ಹಾಕಲಿ, ನಾವು ಅವರಿಗೆ ಆಜ್ಞೆ ಮಾಡುವುದಕ್ಕೆ ಆಗಲ್ಲ ಎಂದರು.

 

ರಾಜ್ಯದಲ್ಲಿ ಪರೀಕ್ಷೆ, ನೇಮಕಾತಿ ಎಲ್ಲದರಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಸರ್ಟಿಫಿಕೇಟ್​ಗಳು, ಪಾಸ್ ಮಾಡೋದು ಇವೆಲ್ಲಾ ದಂಧೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ರಾಜ್ಯ ಸರ್ಕಾರ ಹಗರಣಗಳನ್ನು ಮುಚ್ಚಿಡುವಂತಹ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಅವರು ಮಾಜಿ ಸಚಿವ ಈಶ್ವರಪ್ಪ ಅಪರಾಧಿಯಲ್ಲ ಎಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆ.ಹಗರಣವನ್ನು ಮುಚ್ಚಿ ಹಾಕಲು ಸಣ್ಣಪುಟ್ಟ ಅಧಿಕಾರಿಗಳ ಮೇಲೆ ಆಯಕ್ಷನ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್​ ಪ್ರತಿಭಟನೆ ಹಾಗೂ ಪಾದಯಾತ್ರೆ ಚುನಾವಣಾ ಗಿಮಿಕ್​ ಎಂದು ಜರಿದಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರರ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ಹಿಂದೆ ಎಲ್​ ಕೆ ಅಡ್ವಾಣಿ, ಯಡಿಯೂರಪ್ಪ ಅವರು ಮಾಡಿದ ಯಾತ್ರೆಗಳೆಲ್ಲಾ ಗಿಮಿಕ್ ಆಗಿದ್ದವಾ ಎಂದು ಪ್ರಶ್ನಿಸಿದರು

ಹಗರಣವನ್ನು ಮುಚ್ಚಿ ಹಾಕಲು ಸಣ್ಣಪುಟ್ಟ ಅಧಿಕಾರಿಗಳ ಮೇಲೆ ಆಯಕ್ಷನ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್​ ಪ್ರತಿಭಟನೆ ಹಾಗೂ ಪಾದಯಾತ್ರೆ ಚುನಾವಣಾ ಗಿಮಿಕ್​ ಎಂದು ಜರಿದಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರರ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ಹಿಂದೆ ಎಲ್​ ಕೆ ಅಡ್ವಾಣಿ, ಯಡಿಯೂರಪ್ಪ ಅವರು ಮಾಡಿದ ಯಾತ್ರೆಗಳೆಲ್ಲಾ ಗಿಮಿಕ್ ಆಗಿದ್ದವಾ ಎಂದು ಪ್ರಶ್ನಿಸಿದರು.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ