ಬೆಂಗಳೂರು : ಪರ್ಸನಲ್ ಲೈಫ್ ಮೂಲಕ ಮತ್ತೆ ರಮ್ಯಾ ಸದ್ದು ಮಾಡುತ್ತಿದ್ದು, ಗಾಂಧಿನಗರದಲ್ಲಿ ರಮ್ಯಾ ಫೋಟೋ ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ. ಸೋಷಿಯಲ್ ಮೀಡಿಯಾ ದಲ್ಲಿ ಪದ್ಮಾವತಿ ಫೋಟೋ ಸುಂಟರಗಾಳಿ ಎಬ್ಬಿಸಿದ್ದು, ಕೆಲ ಗಂಟೆಗಳ ಹಿಂದೆ ಸಖತ್ ಕ್ಲೋಸ್ ಆಗಿ ಹುಡುಗನ ಜೊತೆ ಇರುವ ಫೋಟೋವೊಂದನ್ನ ಸೋಷಿಯಲ್ ಮೀಡಿಯಾ ದಲ್ಲಿ ರಮ್ಯಾ ಶೇರ್ ಮಾಡಿದ್ರು, ರಮ್ಯಾ ಫೋಟೋ ನೋಡ್ತಿದಂತೆ ಅಭಿಮಾನಿಗಳು ಶಾಕ್ ಆಗಿದ್ದು, ಜೊತೆಗೆ ಫುಲ್ ಥ್ರಿಲ್ ಆಗಿದ್ದಾರೆ.
ಫೋಟೋದಲ್ಲಿ ರಮ್ಯಾ ಜೊತೆಗೆ ಇರುವವರು ಯಾರು..? ಆ ವ್ಯಕ್ತಿ ರಮ್ಯಾಗೆ ಏನ್ ಆಗಬೇಕು..? ಅಂತ ಗಾಂಧಿನಗರದ ಗಲ್ಲಿ ಗಲ್ಲಿ ರಮ್ಯಾ ಹಾಟ್ ಫೋಟೋದೇ ಚರ್ಚೆ ಜೋರಾಗಿದೆ. ಮೋಹಕ ತಾರೆ ರಮ್ಯಾ ಅವರು ರಾಜಕೀಯಕ್ಕೆ ಎಂಟ್ರಿ ಕೊಟ್ಟ ನಂತರ ಚಿತ್ರರಂಗ ದಿಂದ ದೂರ ಉಳಿದಿದ್ದರು. 2019ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿತ್ತು ಆದದನಂತರ ಅವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ, ಈಗ ಅವರು ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಆಯಕ್ಟೀವ್ ಆಗಿರುವುದರಿಂದ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುವ ಸಾಧ್ಯತೆ ಇದೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.