Breaking News

ಕ್ಷಿಪ್ರ ಕಾರ್ಯ‍ಪಡೆ ಪಥಸಂಚಲನ

Spread the love

ಬೆಳಗಾವಿ: ರ‍್ಯಾಪಿಡ್‌ ಆಕ್ಷನ್ ಫೋರ್ಸ್ (ಕ್ಷಿಪ್ರ ಕಾರ್ಯಪಡೆ) ಮತ್ತು ಪೊಲೀಸ್ ಅಧಿಕಾರಿಗಳು ನಗರದ ಕೆಲವು ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಪಥಸಂಚಲನ ನಡೆಸಿ, ಸಾರ್ವಜನಿಕರಿಗೆ ಧೈರ್ಯ ತುಂಬಲು ಶುಕ್ರವಾರ ಪ್ರಯತ್ನಿಸಿದರು.

 

65 ಮಂದಿಯ ‍ಪಡೆ ನಗರಕ್ಕೆ ಬಂದಿದೆ. ರಾಣಿ ಚನ್ನಮ್ಮ ವೃತ್ತದಿಂದ ಕಾಕತಿವೇಸ್, ಶನಿವಾರಕೂಟ್, ಕಂಜರ್‌ಗಲ್ಲಿ, ದರ್ಬಾರ್ ಗಲ್ಲಿ, ಶಾಸ್ತ್ರಿಚೌಕ, ಖಡಕ್‍ಗಲ್ಲಿ, ಖಡೇಬಜಾರ್ ರಸ್ತೆ, ಭಡಕಲ್ ಗಲ್ಲಿ, ನಾನಾಪಾಟೀಲ ಚೌಕ, ಚವಾಟ್ ಗಲ್ಲಿ, ಹಳೆಯ ಪಿ.ಬಿ. ರಸ್ತೆ, ಮಾರ್ಕೆಟ್ ಪೊಲೀಸ್ ಠಾಣೆ ಎದುರು, ತೆಂಗಿನಕೇರಿ ಗಲ್ಲಿ, ಬೆಂಡಿ ಬಜಾರ್, ಆಜಾದ್ ಗಲ್ಲಿ, ಪಿಂಪಳ್‌ಕಟ್ಟಾ, ಕಂಬಳಿಕೂಟ್ ಮೂಲಕ ಸಾಗಿದ ಪಥಸಂಚಲನ ಸಮಾದೇವಿ ಗಲ್ಲಿಯ ಮಾರುತಿ ಮಂದಿರದ ಬಳಿ ಕೊನೆಗೊಂಡಿತು. ಮಾರ್ಗದಲ್ಲಿ ಕಾನೂನು ಸುವ್ಯವ್ಯಸ್ಥೆಯ ಬಗ್ಗೆ ಪಡೆಯವರು ಮಾಹಿತಿ ಸಂಗ್ರಹಿಸಿದರು.

ಪಡೆಯು ಒಂದು ವಾರ ಇಲ್ಲಿರಲಿದ್ದು, ಮತ್ತಷ್ಟು ಪ್ರದೇಶಗಳಲ್ಲಿ ಪಂಥಸಂಚಲನ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.


Spread the love

About Laxminews 24x7

Check Also

ಮಾಳಮಾರುತಿ ಪೊಲೀಸ್ ಠಾಣೆಯ ಸಿಪಿಐ ಜೆ.ಎಂ.ಕಾಲೆಮಿರ್ಚಿ ಪುಂಡ ಎಂಇಎಸ್ ಮುಖಂಡನ ಜೊತೆಗೆ ಸೆಲ್ಪಿ

Spread the loveಕರ್ನಾಟಕ‌ ರಾಜ್ಯೋತ್ಸವದಲ್ಲಿ ಕರಾಳ ದಿನಾಚರಣೆ ಮಾಡಲು ಎಂಇಎಸ್ ಗೆ ಅನುಮತಿ ಕೊಡುವುದಿಲ್ಲ ಎಂದು ರಾತ್ರೋರಾತ್ರಿ ಈ‌ ಮೊದಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ