Breaking News

ಪಿಎಸ್ ಐ ನೇಮಕ ಹಗರಣ: ನ್ಯಾಯಾಂಗ ತನಿಖೆ ನಡೆಸಬೇಕು: ಸಿದ್ದರಾಮಯ್ಯ

Spread the love

ಬೆಂಗಳೂರು: ಪಿಎಸ್ ಐ ವರ್ಗಾವಣೆ ಆರೋಪಿಗಳು ಸಚಿವ ಅಶ್ವತ್ಥನಾರಾಯಣ ಅವರ ನೆಂಟರು. ಈ ಸರಕಾರ ಸಾಮಾನ್ಯ ಜನಪೀಡಕ ಸರಕಾರ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದ ಆರೋಪಿಗಳಾದ ದರ್ಶನ ಗೌಡ ಹಾಗೂ ನಾಗೇಶ್ ಗೌಡ ಸಚಿವ ಅಶ್ವತ್ಥನಾರಾಯಣ ಅವರ ನೆಂಟರು.

ಈ ಕಾರಣಕ್ಕಾಗಿ ಅವರನ್ನು ಬಿಟ್ಟುಕಳಿಸಿದ್ದಾರೆ. ಉನ್ನತ ಶಿಕ್ಷಣ ಇಲಾಖೆಯ ಸಹಾಯಕ ಪ್ರಾಧ್ಯಾಪಕರ ನೇಮಕದಲ್ಲೂ ಅಕ್ರಮ ನಡೆದಿದ್ದು, ಅಶ್ವತ್ಥನಾರಾಯಣ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ತಕ್ಷಣ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿದರು.

ರಾಜ್ಯದಲ್ಲಿರುವುದು 40% ಸರಕಾರ. ಜನಪೀಡಕ ಸರಕಾರ. ಆದರೆ ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬೊಮ್ಮಾಯಿ ಸರಕಾರಕ್ಕೆ ಬೆನ್ನು ತಟ್ಟಿ ಹೋಗಿದ್ದಾರೆ. ಇದರರ್ಥ ಕೇಂದ್ರ ಸರಕಾರ ಈ ಭ್ರಷ್ಟಾಚಾರವನ್ನು ಸಮರ್ಥನೆ ಮಾಡಿದಂತಲ್ಲವೇ ? ಪ್ರಧಾನಿ ನರೇಂದ್ರ ಮೋದಿಯವರು ಕಮಿಷನ್ ಆರೋಪಕ್ಕೆ ಸಂಬಂಧಪಟ್ಡಂತೆ ಮೌನಕ್ಕೆ ಶರಣಾಗಿರುವುದರ ಅರ್ಥವೇನು? ಜನರ ಕಣ್ಣಿಗೆ ಮಣ್ಣೆರೆಚುವುದನ್ನು ಇನ್ನಾದರೂ ಬಿಡಿ ಎಂದು ಆರೋಪಿಸಿದರು.


Spread the love

About Laxminews 24x7

Check Also

ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂಪಾಯಿ ವಂಚನೆ

Spread the loveಮಂಗಳೂರು: ಮಂಗಳೂರಿನ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆದ ಆನ್‌ಲೈನ್ ವಂಚನೆಯಲ್ಲಿ 3 ಕೋಟಿ 15 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ