ಹಾವೇರಿ: ಬಸವ ಜಯಂತಿ ಪ್ರಯುಕ್ತ ನಡೆದ ಎತ್ತುಗಳ ಮೆರವಣಿಗೆ ವೇಳೆ ಸವಣೂರು ತಾಲೂಕಿನ ಗ್ರಾಮದಲ್ಲಿ ಯುವಕನೊಬ್ಬ ಚಪ್ಪಲಿ ತೂರಿ ವಿಕೃತಿ ಮೆರೆದಿದ್ದಾನೆ.
ಮಂಗಳವಾರ ರಾತ್ರಿ ಕಾರಡಗಿ ಗ್ರಾಮದಲ್ಲಿ ಮೆರವಣಿಗೆ ಹೋಗುತ್ತಿದ್ದ ವೇಳೆ ಎತ್ತುಗಳ ಮೇಲೆ ಖಾಜಾಮುದ್ದೀನ್ ಕೋಲ್ಕಾರ(29) ಎಂಬಾತ ಚಪ್ಪಲಿ ತೂರಿದ್ದಾನೆ.
ಚಪ್ಪಲಿ ತೂರಿದ್ದಕ್ಕೆ ಆಕ್ರೋಶಗೊಂಡ ಜನರು ಯುವಕನನ್ನು ಹಿಡಿದು ಕಟ್ಟಿ ಹಾಕಿ ಥಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಖಾಜಾಮುದ್ಧೀನ್‌ನನ್ನು ವಶಕ್ಕೆ ಪಡೆದಿದ್ದಾರೆ.