ಗಡಿ ವಿವಾದಲ್ಲಿ ಮತ್ತೆ ಉದ್ಧಟತನ ಮೆರೆದ ನಾಡದ್ರೋಹಿ ಎಂಇಎಸ್ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಎಂಇಎಸ್‍ನವರ ಪುಂಡಾಟಿಕೆಯನ್ನ ಸರ್ಕಾರ ಹತ್ತಿಕ್ಕಬೇಕು. ಎಂಇಎಸ್ ಬಾಲ ಬಿಚ್ಚೋಕೆ ಬಿಡಬಾರದು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ನಾಡದ್ರೋಹಿ ಎಂಇಎಸ್ ಮುಖಂಡನೊರ್ವ ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ್, ಬಾಲ್ಕಿ ಸಹಿತ ನೂತನ ನಕ್ಷೆ ತಯಾರಿಸಿ ಅಖಂಡ ಮಹಾರಾಷ್ಟ್ರ ನಕ್ಷೆ ಇರುವ ಪೋಸ್ಟ ಫೇಸಬುಕ್‍ನಲ್ಲಿ ಹಾಕಿರುವ ಬಗ್ಗೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್‍ಎಚ್ ಗ್ರಾಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ ಮಹಾರಾಷ್ಟ್ರ ಗಡಿ ವಿವಾದ ವಿಚಾರ ಮಹಾಜನ್ ವರದಿಯಲ್ಲಿ ಈಗಾಗಲೇ ಇತ್ಯರ್ಥವಾಗಿದೆ. ಯಾವ್ಯಾವ ಪ್ರದೇಶಗಳು ಕರ್ನಾಟಗ ಹಾಗೂ ಮಹಾರಾಷ್ಟ್ರಕ್ಕೆ ಎಂಬುದು ಇತ್ಯರ್ಥವಾಗಿದೆ. ಈಗ ರಾಜಕಾರಣಕ್ಕಾಗಿ ಕ್ಯಾತೆ ತೆಗೆಯುತ್ತಾರೆ. ಇದನ್ನೆಲ್ಲಾ ಸರ್ಕಾರ ಹತ್ತಿಕ್ಕಬೇಕು ಎಂದು ಆಗ್ರಹಿಸಿದರು.
ಎಂಇಎಸ್ ಪುಂಡರ ಮೇಲಿನ ಮೊಕದ್ದಮೆಗಳನ್ನು ಸರ್ಕಾರ ವಾಪಸ್ ತೆಗೆದುಕೊಂಡ ಬಳಿಕ ಈ ವರ್ತನೆ ಶುರುವಾಗಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರ ಎಂಇಎಸ್ ನವರ ಬಗ್ಗೆ ಲಿವಿಯೆಂಟ್ ವಿವ್ ತಗೋಬಾರದು. ಕಠಿಣವಾದ ಕ್ರಮ ತೆಗೆದುಕೊಳ್ಳಬೇಕು. ಎಂಇಎಸ್‍ನವರ ಪುಂಡಾಟಿಕೆಯನ್ನ ಸರ್ಕಾರ ಹತ್ತಿಕ್ಕಬೇಕು. ಎಂಇಎಸ್ ಬಾಲ ಬಿಚ್ಚೋಕೆ ಬಿಡಬಾರದು ಎಂದರು.