Breaking News

ಟ್ರೇಲರ್‌ ಹಿಟ್‌ ಎಫೆಕ್ಟ್; ‘ತೋತಾಪುರಿ’ಗೆ ಫುಲ್‌ ಡಿಮ್ಯಾಂಡ್‌

Spread the love

ಕೆಲವು ಸಿನಿಮಾಗಳ ತುಣುಕು ಇಡೀ ಸಿನಿಮಾದ ಭವಿಷ್ಯ ಹೇಳಿ ಬಿಡುತ್ತದೆ. ಈಗ “ತೋತಾಪುರಿ’ ಚಿತ್ರದ ಟ್ರೇಲರ್‌ ಕೂಡಾ ಈ ಚಿತ್ರದ ಭವಿಷ್ಯದ ಭರವಸೆ ಮೂಡಿಸಿದೆ. ಅದು ಹೇಗೆಂದು ನೀವು ಕೇಳಬಹುದು. ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿ ಹಿಟ್‌ಲಿಸ್ಟ್‌ ಸೇರಿದೆ.

5 ಮಿಲಿಯನ್‌ಗೆ ಅಧಿಕ ವೀವ್ಸ್‌ನೊಂದಿಗೆ ಮುನ್ನುಗ್ಗುತ್ತಿದೆ. ಇದರೊಂದಿಗೆ ಸಿನಿಮಾದ ಬಿಝಿನೆಸ್‌ ಕೂಡಾ ಏರಿದೆ.

ಸಿನಿಮಾದ ವಿತರಣೆಗೆ ನಿರ್ಮಾಪಕರನ್ನು ಸಂಪರ್ಕಿಸುವವರ ಸಂಖ್ಯೆ ಹೆಚ್ಚಾಗಿದೆ. ಜೊತೆಗೆ ಚಿತ್ರಕ್ಕೆ ಎಲ್ಲಾ ಏರಿಯಾಗಳಿಂದಲೂ ಬೇಡಿಕೆ ಬರುತ್ತಿದೆ. ಈ ಮೂಲಕ “ತೋತಾಪುರಿ’ ಹವಾ ಕ್ರಿಯೇಟ್‌ ಮಾಡಿದೆ. ಚಿತ್ರದ ಟ್ರೇಲರ್‌ ನೋಡಿದವರಿಗೆ ನಿರ್ದೇಶಕ ವಿಜಯ ಪ್ರಸಾದ್‌ ಸಿನಿಮಾದ ಚೇಷ್ಟೆ ಹಾಗೂ ಜಗ್ಗೇಶ್‌ ಅವರ ಮ್ಯಾನರೀಸಂ ಖುಷಿ ಕೊಡುತ್ತಿದೆ. ಈ ಚಿತ್ರ ಇಡೀ ಫ್ಯಾಮಿಲಿ ಆಡಿಯನ್ಸ್‌ಗೆ ನಗೆಹಬ್ಬವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಚಿತ್ರದಲ್ಲಿ ಚೇಷ್ಟೇ, ಫ‌ನ್ನಿ ಅಂಶಗಳ ಜೊತೆಗೆ ಗಂಭೀರವಾದ ಹಾಗೂ ಇವತ್ತು ಸಮಾಜಕ್ಕೆ ಹೆಚ್ಚು ಪ್ರಸ್ತುತವಾದ ಅಂಶಗಳು ಇವೆ ಎನ್ನಲಾಗಿದೆ.

ಅಂದಹಾಗೆ, ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದೆ. ಎರಡೂ ಭಾಗದ ಶೂಟಿಂಗ್‌ ಮೊದಲೇ ಮುಗಿಸಿ ಬಿಡುಗಡೆಗೆ ಸಜ್ಜಾಗಿರುವುದೂ ಇದೇ ಮೊದಲು. ಮೋನಿಫಿಕ್ಸ್‌ ಸ್ಟುಡಿಯೋಸ್‌ ಬ್ಯಾನರ್‌ ಅಡಿಯಲ್ಲಿ ಕೆ.ಎ.ಸುರೇಶ್‌ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅತಿಹೆಚ್ಚು ದಿನ ಚಿತ್ರೀಕರಣ ಮಾಡಿರುವ ಸಿನಿಮಾ ಎಂಬ ಹೆಗ್ಗಳಿಕೆ “ತೋತಾಪುರಿ’ಗಿದೆ.

ತಾರಾಗಣದ ವಿಷಯದಲ್ಲೂ ದಾಖಲೆ ಬರೆದಿರುವ ಈ ಚಿತ್ರದಲ್ಲಿ ಡಾಲಿ ಧನಂಜಯ್, ಅದಿತಿ ಪ್ರಭುದೇವ, ಸುಮನ್‌ ರಂಗನಾಥ್‌, ದತ್ತಣ್ಣ, ವೀಣಾ ಸುಂದರ್‌ ಹಾಗೂ ಹೇಮಾದತ್‌ ಕಲಾವಿದರು ಬಣ್ಣ ಹಚ್ಚಿದ್ದಾರೆ.


Spread the love

About Laxminews 24x7

Check Also

ಎಲ್ಲ ಧರ್ಮಕ್ಕಿಂತ ಮಾನವ ಧರ್ಮವೇ ಮೇಲು: ಸಿಎಂ

Spread the loveಮೈಸೂರು: ದಯೆಯೇ ಧರ್ಮದ ಮೂಲವಯ್ಯ, ದಯೆಯಿಲ್ಲದ ಧರ್ಮ ಯಾವುದಯ್ಯ ಎಂದು ಬಸವಣ್ಣನವರು ಧರ್ಮದ ಕುರಿತು ವ್ಯಾಖ್ಯಾನ ಮಾಡಿದ್ದಾರೆ. ಎಲ್ಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ