ಎರಡು ದಶಕಗಳ ಹಿಂದೆ ಚಿತ್ರರಂಗದಲ್ಲಿ ಸೆನ್ಸೇಶನ್ ಸೃಷ್ಟಿಸಿದ್ದು ಕಹೋ ನಾ ಪ್ಯಾರ್ ಹೈ ಹಿಂದಿ ಚಿತ್ರ. ಹೃತಿಕ್ ರೋಷನ್ ಈ ಚಿತ್ರದ ಮೂಲಕವೇ ಬಹಳಷ್ಟು ಖ್ಯಾತಿ ಪಡೆದಿದ್ದರು.
22 ವರ್ಷದ ಹಿಂದಿನ ಚಿತ್ರದ ಬಗ್ಗೆ ಈಗೇಕೆ ಪೀಠಿಕೆ ಎಂದಿರಾ? ಈ ಚಿತ್ರದ ನಟಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.
ಹೃತಿಕ್ ರೋಷನ್‌ಗೆ ನಾಯಕಿಯಾಗಿ ನಟಿಸಿ ಜನರ ಮನಗೆದ್ದಿದ್ದ ಖ್ಯಾತ ನಟಿ ಅಮೀಶಾ ಪಟೇಲ್ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ಆಕೆಯ ವಿರುದ್ಧ ಕಾರ್ಯಕ್ರಮವೊಂದರ ಸಂಘಟಕರು ಅಸಮಾಧಾನಗೊಂಡಿದ್ದು, ಸಾಮಾಜಿಕ ಕಾರ್ಯಕರ್ತ ದೂರು ದಾಖಲಿಸಿದ್ದಾರೆ.
ಇತ್ತೀಚೆಗೆ ಮಧ್ಯಪ್ರದೇಶದ ಖಾಂಡ್ವಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಮೀಶಾ ಪಟೇಲ್ ಪ್ರದರ್ಶನ ನೀಡಿದರು. ಬಳಿಕ ಟ್ವೀಟ್ ಮಾಡಿ ಕಾರ್ಯಕ್ರಮ ನಡೆದ ಸ್ಥಳ ಸೇಫ್ ಇರಲಿಲ್ಲ, ಸೂಕ್ತ ರಕ್ಷಣೆ ನೀಡಿದ ಸ್ಥಳೀಯ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದರು.
ಇದೇ ವೇಳೆ ಸಾಮಾಜಿಕ ಕಾರ್ಯಕರ್ತ ಸುನೀಲ್ ಜೈನ್ ಎಂಬಾತ ಆಕೆ ವಿರುದ್ಧ ವಂಚನೆ ದೂರು ದಾಖಲಿಸಿದ್ದು, ಅಮೀಶಾ ಕಾರ್ಯಕ್ರಮಕ್ಕಾಗಿ ಭಾರಿ ಮೊತ್ತ ವಸೂಲಿ ಮಾಡಿದ್ದಾರೆ. ಆದರೆ ಕೇವಲ ವೇದಿಕೆಯಲ್ಲಿ ಕಡಿಮೆ ಅವಧಿಯಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Laxmi News 24×7