Breaking News

ರಮ್ಮಿ ಜೂಜಾಟಕ್ಕೆ ಮಾಡಿದ ಸಾಲ ತೀರಿಸಲು ವಿಫಲಳಾಗಿ ನೇಣಿಗೆ ಶರಣು-ಯುವತಿಯ ಸಾವಿನ ರಹಸ್ಯ ಬಯಲು

Spread the love

ಕೋಯಿಕ್ಕೋಡ್: ಕೇರಳದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ ಬಿಜಿಶಾ ಸಾವಿನ ರಹಸ್ಯವನ್ನು ಕೊನೆಗೂ ಪೊಲೀಸರು ಬೇಧಿಸಿದ್ದು, ಆನ್‌ಲೈನ್ ಗೇಮಿಂಗ್‌ನಲ್ಲಿ ಕೋಟ್ಯಾಂತರ ರೂ. ವ್ಯವಹಾರ ಮಾಡಿ ಸಾಲ ತೀರಿಸಲು ಸಾಧ್ಯವಾಗದಿರುವುದೇ ಸಾವಿಗೆ ಕಾರಣ ಎಂದು ತಿಳಿದು ಬಂದಿದೆ.

ಚೆಲಾಯಿಲ್ ಮೂಲದ ಬಿಜಿಶಾ ಶವ ಕಳೆದ ಡಿಸೆಂಬರ್‌ನಲ್ಲಿ ನೇಣಿ ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆದರೆ ಆಕೆಯ ಆತ್ಮಹತ್ಯೆಗೆ ಕಾರಣ ಏನೆಂದು ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಆದರೆ ತದನಂತರ ಆಕೆಯ ಬ್ಯಾಂಕ್ ವ್ಯವಹಾರಗಳನ್ನು ಗಮನಿಸಿದಾಗ ತನ್ನ ಎರಡು ಬ್ಯಾಂಕ್ ಖಾತೆಗಳಲ್ಲಿ ಯುಪಿಐ ಆಪ್ ಮೂಲಕ 1.45 ಕೋಟಿ ರೂ. ವ್ಯವಹಾರ ಮಾಡಿರುವುದು ಕಂಡು ಬಂದಿತ್ತು. ಇದರ ಜಾಡು ಹಿಡಿದು ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಆಕೆ ಆನ್‌ಲೈನ್ ರಮ್ಮಿಗೇಮ್‌ಗಾಗಿ ಕೈಸಾಲ ಮಾಡಿರುವುದಲ್ಲದೆ ಸಾಲ ನೀಡುವ ಆನ್‌ಲೈನ್ ಸಂಸ್ಥೆಗಳಿಂದಲೂ ಸಾಲ ಪಡೆದುಕೊಂಡಿದ್ದಳು. ಅಲ್ಲದೆ ಗೇಮ್‌ನಲ್ಲಿ ವಿಫಲವಾದಾಗ ತನ್ನ ಮದುವೆಗೆಂದು ಖರೀದಿಸಿದ್ದ 35 ಪವನ್ ಚಿನ್ನದ ಸರವನ್ನೂ ಅಡವಿಟ್ಟಿದ್ದಳು. ಆದರೂ ಸಾಲ ತೀರಿಸಲು ಸಾಧ್ಯವಾಗದಿದ್ದಾಗ ಸಾಲ ಮರುಪಾವತಿಗಾಗಿ ಸಂಸ್ಥೆಗಳು ಒತ್ತಾಯಿಸಿದ ಪರಿಣಾಮ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಬಿಇಡಿ ಪದವೀಧರೆಯಾಗಿರುವ ಅವರು ಖಾಸಗಿ ಟೆಲಿಕಾಂ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇವರು ಜೂಜಾಟದ ಯಾವುದೇ ವ್ಯವಹಾರದ ಬಗ್ಗೆ ಮನೆಯವರಿಗೆ ತಿಳಿದಿರಲಿಲ್ಲ.


Spread the love

About Laxminews 24x7

Check Also

ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ

Spread the love ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ