ಹುಬ್ಬಳ್ಳಿ: ನಗರದ ಗಲಭೆ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಪೈಕಿ 40 ಕ್ಕೂ ಹೆಚ್ಚು ಪುಂಡರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಪೊಲೀಸರು ಚಿಂತನೆ ನಡೆಸಿದ್ದಾರೆ.
ಹುಬ್ಬಳ್ಳಿ ಪೊಲೀಸರು 40 ಜನ ಆರೋಪಿಗಳ ವಿರುದ್ಧ ರೌಡಿ ಶೀಟ್ ಓಪನ್ ಮಾಡಲು ಮುಂದಾಗಿದ್ದಾರೆ. ಗಲಭೆಯ ಸೂತ್ರಧಾರಿಗಳ ವಿರುದ್ಧ ಗೂಂಡಾ ಕಾಯ್ದೆ ಪ್ರಯೋಗಿಸಲು ಸಿದ್ಧತೆ ನಡೆಸಿದ್ದಾರೆ. 20 ಆರೋಪಿಗಳ ವಿರುದ್ಧ ಕಮ್ಯೂನಲ್ ಗೂಂಡಾಗಳು ಎಂದು ಗುರುತಿಸಲು ಚಿಂತನೆ ನಡೆಸಿದ್ದಾರೆ.