Breaking News

ಗುಣಮುಖವಾಗದ ಕಾಯಿಲೆ, ಮದುವೆಯಾಗದ ಕೊರಗು : ನೇಣು ಬಿಗಿದು ಯುವಕ ಆತ್ಮಹತ್ಯೆ

Spread the love

ಹುನಗುಂದ : ಪಟ್ಟಣದ ಅಮರಾವತಿ ರಸ್ತೆಯಲ್ಲಿರುವ ಇಂಡಿಯನ್ ಗ್ಯಾಸ್ ಗೋಡಾನ್ ಕಪೌಂಡ್ ನ ಒಳಗಡೆಯಲ್ಲಿರುವ ತೆಂಗಿನಮರಕ್ಕೆ ಯುವಕನೊರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.

ಬಸವರಾಜ ಸಿದ್ರಾಮಪ್ಪ ಕೊಡಗಲಿ (27) ಆತ್ಮಹತ್ಯೆಗೆ ಶರಣಾದ ಯುವಕನಾಗಿದ್ದಾನೆ.

 

ಘಟನೆಯ ವಿವರ : ಅಮರಾವತಿ ಗ್ರಾಮದ ಯುವಕ ಬಸವರಾಜ ಸಿದ್ರಾಮಪ್ಪ ಕೊಡಗಲಿ ಕೆಲವು ತಿಂಗಳಿಂದ ಬಿಳಿ ಕಾಮಲೆ ರೋಗದಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆದರೂ ಗುಣಮುಖವಾಗದೇ ಇರೋದು ಮತ್ತು ಕಳೆದ ಎರಡು ವರ್ಷದಿಂದ ಮದುವೆ ಮಾಡಿಕೊಳ್ಳಲು ಹೆಣ್ಣು ಹುಡುಕುತ್ತಿದ್ದರು ಹೆಣ್ಣು ಸಿಗದೇ ಇರೋದರಿಂದ ಮನ ನೊಂದು ಸೋಮವಾರ ರಾತ್ರಿ ಇಂಡಿಯನ್ ಗ್ಯಾಸ್ ಗೋಡಾನ್ ಕಪೌಂಡನಲ್ಲಿರುವ ತೆಂಗಿನಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ಥಳಕ್ಕೆ ಹುನಗುಂದ ಸಿಪಿಐ ಹೊಸಕೇರಪೊಪ ಕೆ,ಪಿಎಸ್‌ಐ ಸೋಮನಗೌಡ ಗೌಡ್ರ ಭೇಟಿ ನೀಡಿ ಪರೀಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ