ಆನೆ ದಂತದಲ್ಲಿ ಚದುರಂಗದ ಪಾನ್ ತಯಾರಿಸುತ್ತಿದ್ದ ಕಳ್ಳರ ಬಂಧನ ಮಾಡಿರುವಂತಹ ಘಟನೆ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಕಪ್ಪು- ಬಿಳಿ ಬಣ್ಣದ 32 ಪಾನ್ ಸಮೇತ ಬಂಧನ ಮಾಡಲಾಗಿದ್ದು, ಹಾಸನ ಜಿಲ್ಲೆಯ ಸಕಲೇಶಪುರ ಮೂಲದ ಮೆಲ್ವಿನ್ ಬಂಧಿತ ಆರೋಪಿ.ಹಾವೇರಿ: 9 ವರ್ಷದ ಬಾಲಕಿ ಮೇಲೆ 59 ವರ್ಷ ವೃದ್ದನಿಂದ ಲೈಗಿಂಕ ದೌರ್ಜನ್ಯ(Sexual Assault)ಎಸಗಿರುವಂತಹ ಘಟನೆ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಂಕಾಪುರನಲ್ಲಿ ನಡೆದಿದೆ.
ಆರೋಪಿ ನಾಗಪ್ಪ ಬಾಡದ ನನ್ನು ಬಂಧಿಸಲಾಗಿದೆ. ಬಂಕಾಪುರ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.
ಆನೆ ದಂತದಲ್ಲಿ ಚದುರಂಗದ ಪಾನ್ ತಯಾರಿಸುತ್ತಿದ್ದ ಕಳ್ಳರ ಬಂಧನ;
ಚಿಕ್ಕಮಗಳೂರು: ಆನೆ ದಂತದಲ್ಲಿ ಚದುರಂಗದ ಪಾನ್ ತಯಾರಿಸುತ್ತಿದ್ದ ಕಳ್ಳರ ಬಂಧನ ಮಾಡಿರುವಂತಹ ಘಟನೆ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಕಪ್ಪು- ಬಿಳಿ ಬಣ್ಣದ 32 ಪಾನ್ ಸಮೇತ ಬಂಧನ ಮಾಡಲಾಗಿದ್ದು, ಹಾಸನ ಜಿಲ್ಲೆಯ ಸಕಲೇಶಪುರ ಮೂಲದ ಮೆಲ್ವಿನ್ ಬಂಧಿತ ಆರೋಪಿ. ಆನೆ ದಂತದಲ್ಲಿ ಕೆತ್ತಿದ್ದ ಚೆಸ್ ಪಾನ್ ಇಡುವ ಬಾಕ್ಸ್ ವಶಕ್ಕೆ ಪಡೆಯಲಾಗಿದೆ. ಆರೋಪಿ ಬಳಿ ಚೆಸ್ ಪಾನ್ ಜೊತೆಗೆ ಜಿಂಕೆ ಕೊಂಬು ಪತ್ತೆಯಾಗಿದೆ. ಅರಣ್ಯ ಇಲಾಖೆ ಸಿಐಡಿ ವಿಭಾಗದ ಅಧಿಕಾರಿಗಳಿಂದ ದಾಳಿ ಮಾಡಿದ ವೇಳೆ ಕಳ್ಳರ ಬಂಧನ ಮಾಡಲಾಗಿದೆ.
ಲಾರಿ ಚಾಲಕನ ನಿರ್ಲಕ್ಷ್ಯ ಫುಟ್ ಪಾತ್ ಮೇಲೆ ಹರಿದ ಲಾರಿ
ರಾಯಚೂರು: ನಗರದ ಸ್ಟೇಷನ್ ರಸ್ತೆಯಲ್ಲಿ ಅಕ್ಕಿ ಸಾಗಣೆ ಲಾರಿ ಫುಟ್ಪಾತ್ ಮೇಲೆ ಚಲಿಸಿ ಲೋಕಾಯುಕ್ತ ಕಚೇರಿ ಕಾಂಪೌಂಡ್ಗೆ ಡಿಕ್ಕಿ ಹೊಡೆದಿದೆ. ಮದ್ಯದ ಅಮಲಿನಲ್ಲಿ ಲಾರಿ ಚಲಾಯಿಸುತ್ತಿದ್ದ ಚಾಲಕನಿಂದ ಕೃತ್ಯ. ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.