ಗೌರಿ ಖಾನ್ ವೃತ್ತಿಯಲ್ಲಿ ಇಂಟೀರಿಯರ್ ಡಿಸೈನರ್. ಅವರಿಗೆ ಮನೆಯನ್ನು ಹೇಗೆ ಇಟ್ಟುಕೊಳ್ಳಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ ಹೆಚ್ಚು ಕಾಳಜಿ ಇದೆ. ‘ಮನ್ನತ್’ಗೆ ಹೊಸ ನೇಮ್ಪ್ಲೇಟ್ ಹಾಕಲು ಅವರೇ ಆಸಕ್ತಿ ತೋರಿದ್ದರು.
ಸೆಲೆಬ್ರಿಟಿಗಳು ಮಾಡುವ ಸಣ್ಣ ಕೆಲಸಗಳು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತವೆ.
ಅವರು ಕಾರು ಖರೀದಿಸಿದರೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿಯಾಗುತ್ತದೆ. ಶಾರುಖ್ ಖಾನ್ ಅವರು (Shah Rukh Khan) ಇದೇ ರೀತಿಯ ವಿಚಾರದಲ್ಲಿ ಸುದ್ದಿಯಾಗಿದ್ದರು. ಅವರ ಮನೆ
ಮನ್ನತ್
ನ (Mannat) ನೇಮ್ಪ್ಲೇಟ್ ಬದಲಾಯಿಸಿದ್ದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಟ್ವಿಟರ್ನಲ್ಲಿ ಮನ್ನತ್ ಹೆಸರು ಟ್ರೆಂಡ್ ಆಗಿತ್ತು. ಈಗ ಈ ಬಗ್ಗೆ ಹೊಸದೊಂದು ಅಪ್ಡೇಟ್ ಬಂದಿದೆ. ಈ ನೇಮ್ಪ್ಲೇಟ್ ಡಿಸೈನ್ ಮಾಡಿದ್ದು ಶಾರುಖ್ ಪತ್ನಿ ಗೌರಿ ಖಾನ್. ಇದಕ್ಕೆ ತಗುಲಿದ ಬೆಲೆ ಕೇಳಿ ಅನೇಕರು ಕಣ್ಣರಳಿಸಿದ್ದಾರೆ.
ಗೌರಿ ಖಾನ್ ವೃತ್ತಿಯಲ್ಲಿ ಇಂಟೀರಿಯರ್ ಡಿಸೈನರ್. ಅವರಿಗೆ ಮನೆಯನ್ನು ಹೇಗೆ ಇಟ್ಟುಕೊಳ್ಳಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ ಹೆಚ್ಚು ಕಾಳಜಿ ಇದೆ. ‘ಮನ್ನತ್’ಗೆ ಹೊಸ ನೇಮ್ಪ್ಲೇಟ್ ಹಾಕಲು ಅವರೇ ಆಸಕ್ತಿ ತೋರಿದ್ದರು. ಅಂತೆಯೇ ಅವರೇ ಮುಂದಾಳತ್ವ ವಹಿಸಿ ಬೋರ್ಡ್ ಸಿದ್ಧಪಡಿಸಿದ್ದಾರೆ. ಈ ಬೋರ್ಡ್ಗೆ ಸುಮಾರು 20-25 ಲಕ್ಷ ರೂಪಾಯಿ ಖರ್ಚಾಗಿದೆ ಎಂದು ವರದಿ ಆಗಿದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.