ಮದ್ದೂರು: ಕಾಂಗ್ರೆಸ್ ಪಕ್ಷದಲ್ಲಿ ( Congress Party ) ನಾಯಕರು ಸರಿಯಾಗಿದ್ದರೇ ನಾವ್ ಯಾಕೆ ಹೊರ ಬರಬೇಕಾಗಿತ್ತು. ಅಲ್ಲಿ ಪರಿಸ್ಥಿತಿ ಸರಿ ಇಲ್ಲದ ಕಾರಣದಿಂದಲೇ ಹೊರ ಬರುವಂತೆ ಆಯ್ತು. ಅನೇಕರು ನೀವು ಹೋಗಿದ್ದೀರಿ. ನಮ್ಮನ್ನು ಕರೆದುಕೊಳ್ಳಿ ಅಂತ ಕೇಳುತ್ತಿದ್ದಾರೆ.
ನಾವು ಕರೆ ಕೊಟ್ವಿ ಅಂದೇ, ಇಡೀ ಕಾಂಗ್ರೆಸ್ ಪಕ್ಷವೇ ಖಾಲಿ ಆಗಲಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ ( Assembly Election ) ಅಭ್ಯರ್ಥಿಗಳೇ ಇಲ್ಲದಂತೆ ಆದ್ರೂ ಆಗಬಹುದು ಎಂಬುದಾಗಿ ಶಾಸಕ ವಿ.ಮುನಿರತ್ನ ( MLA V Munirathna ) ಹೇಳಿದ್ದಾರೆ.