ಭಾರತ ನಮ್ಮ ‘ದೊಡ್ಡಣ್ಣ’ -ಪ್ರಧಾನಿ ಮೋದಿ ಸಹಾಯ ನೆನೆದ ಜಯಸೂರ್ಯ
ಶ್ರೀಲಂಕಾಗೆ ಭಾರತ ‘ಬಿಗ್ ಬ್ರದರ್’ ಎಂದು ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಬಣ್ಣಿಸಿದ್ದಾರೆ. ಸ್ವಾತಂತ್ರ್ಯ ಬಳಿಕ ಭೀಕರವಾಗಿ ಆರ್ಥಿಕ ದಿವಾಳಿತನವನ್ನ ಎದುರಿಸುತ್ತಿರುವ ಲಂಕಾಗೆ, ಭಾರತ ಮಾಡಿರುವ ಸಹಾಯವನ್ನ ನೆನೆದು ಜಯಸೂರ್ಯ ಭಾರತ ನಮ್ಮ ದೊಡ್ಡಣ್ಣ ಎಂದಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತ ಮಾಡಿರುವ ಸಹಾಯವನ್ನ ಈ ಸಂದರ್ಭದಲ್ಲಿ ಸ್ಮರಿಸಿರುವ ಅವರು, ಭಾರತ ನಮ್ಮ ನೆರೆಯ ರಾಷ್ಟ್ರ.. ನಮ್ಮ ದೊಡ್ಡಣ್ಣ.. ನಮಗೆ ಭಾರತ ಯಾವಾಗಲೂ ಸಹಾಯ ಮಾಡುತ್ತದೆ. ಪ್ರಧಾನಿ ಮೋದಿ ಹಾಗೂ ಭಾರತಕ್ಕೆ ಈ ಸಂದರ್ಭದಲ್ಲಿ ನಾವು ಧನ್ಯವಾದ ತಿಳಿಸುತ್ತೇವೆ. ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಬದುಕು ತುಂಬಾ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ನಾವು ಭಾರತ ಸೇರಿದಂತೆ ಹಲವು ದೇಶಗಳಿಂದ ಮತ್ತಷ್ಟು ಸಹಾಯ ಸಿಗುವ ನಿರೀಕ್ಷೆಯನ್ನ ಹೊಂದಿದ್ದೇವೆ ಎಂದಿದ್ದಾರೆ.