Breaking News

ಕಾರ್ವಿುಕರಿಗೆ ಕನಿಷ್ಠ ವೇತನ ಭದ್ರತೆ; ತಿಂಗಳಿಗೆ 10,685 ರೂಪಾಯಿಗಿಂತ ಕಡಿಮೆ ಸಂಬಳ ಕೊಡುವಂತಿಲ್ಲ

Spread the love

ಭದ್ರತಾ ಏಜೆನ್ಸಿ ಹಾಗೂ ಆಟೋಮೊಬೈಲ್ ಇಂಡಸ್ಟ್ರಿಗಳಲ್ಲಿ ಕೆಲಸ ಮಾಡುವ ಕಾರ್ವಿುಕರಿಗೆ ‘ಕನಿಷ್ಠ ವೇತನ’ ನಿಗದಿಪಡಿಸಿ ರಾಜ್ಯ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದ್ದು, ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿದೆ.

ಕೆಲವೇ ದಿನಗಳಲ್ಲಿ ಹೊಸ ಕಾಯ್ದೆ ಜಾರಿಯಾಗಲಿದ್ದು, ತಿಂಗಳಿಗೆ ಕನಿಷ್ಠ ವೇತನ 10,685 ರೂ. (ತುಟ್ಟಿಭತ್ಯೆ ಹೊರತುಪಡಿಸಿ) ನಿಗದಿಪಡಿಸಿದೆ. ರಾಜ್ಯಾದ್ಯಂತ ಭದ್ರತಾ ಏಜೆನ್ಸಿಗಳಲ್ಲಿ ಕೆಲಸ ಮಾಡುವ, ಏಜೆನ್ಸಿಗಳ ಮೂಲಕ ನೇಮಕ ಮಾಡಿಕೊಳ್ಳುವ ಎಲ್ಲ ಸಿಬ್ಬಂದಿ ಹಾಗೂ ಆಟೋಮೊಬೈಲ್ ಇಂಜಿನಿಯರಿಂಗ್ ಕ್ಷೇತ್ರದ (ಉತ್ಪಾದನೆ, ಅಸೆಂಬ್ಲಿಂಗ್, ಬಾಡಿ ಬಿಲ್ಡಿಂಗ್, ಸರ್ವೀಸಿಂಗ್ ಹಾಗೂ ರಿಪೇರಿ ಕೆಲಸಗಳ ಸಹಿತ) ಉದ್ಯೋಗದಲ್ಲಿರುವ ಕಾರ್ವಿುಕರಿಗೆ ಅನುಕೂಲವಾಗಲಿದೆ. ಇದಕ್ಕಾಗಿ ಕನಿಷ್ಠ ವೇತನ ಕಾಯ್ದೆ-1948ರ ಅನ್ವಯ ರಾಜ್ಯಕ್ಕೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕರಡು ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಸಂಬಳ ಎಷ್ಟಿರಬೇಕು?: ಸೆಕ್ಯುರಿಟಿ ಆಫೀಸರ್, ಫೀಲ್ಡ್ ಆಫೀಸರ್ ಮತ್ತು ಅತಿ ಕುಶಲ ವರ್ಗದ ಕೆಲಸಕ್ಕೆ ವಲಯ-1ರಲ್ಲಿ ದಿನಕ್ಕೆ ಕನಿಷ್ಠ 668.68 ರೂ. ತಿಂಗಳಿಗೆ 17,385 ರೂ. ಇದ್ದರೆ, ವಲಯ-4ರಲ್ಲಿ ದಿನಕ್ಕೆ 577.63 ರೂ. ತಿಂಗಳಿಗೆ ಕನಿಷ್ಠ 15018 ರೂ. ನಿಗದಿ ಮಾಡಲಾಗಿದೆ. ಅಕುಶಲ ಕಾರ್ವಿುಕರಿಗೆ ಈ ಮೊತ್ತವು ದಿನಕ್ಕೆ 445.77 ತಿಂಗಳಿಗೆ 11,590 ರೂ. (ವಲಯ-1) ನಿಗದಿ ಮಾಡಲಾಗಿದೆ. ಇನ್ನು ಕಚೇರಿ ಸಿಬ್ಬಂದಿ ಮ್ಯಾನೇಜರ್ ಸ್ತರದ ಕೆಲಸಕ್ಕೆ ದಿನಕ್ಕೆ 702 ರೂ., ತಿಂಗಳಿಗೆ 18,254.90 ರೂ. ಇದೆ. ವಲಯ-4ರಲ್ಲಿ ಈ ಮೊತ್ತ ದಿನಕ್ಕೆ 606.51 ರೂ., ತಿಂಗಳಿಗೆ 15,769 ರೂ. ನೀಡಬೇಕು ಎಂದು ತಿಳಿಸಲಾಗಿದೆ. ಇದಕ್ಕಿಂತ ಕೆಳಹಂತದ ಸಿಬ್ಬಂದಿಗೆ ದಿನಕ್ಕೆ 577ರಿಂದ 668ರವರೆಗೆ, ತಿಂಗಳಿಗೆ 15,018-17,385 ರೂ.ಗಳವರಗೆ ನಿಗದಿ ಮಾಡಲಾಗಿದೆ.

ದಿನಗೂಲಿಗೂ ತುಟ್ಟಿಭತ್ಯೆ ಅನ್ವಯ: ಕನಿಷ್ಠ ವೇತನದೊಂದಿಗೆ ತುಟ್ಟಿಭತ್ಯೆ ಪಾವತಿಸತಕ್ಕದ್ದು. ಇದಕ್ಕೆ ಪಾಲಿಸಬೇಕಾದ ಗ್ರಾಹಕ ಸೂಚ್ಯಂಕ ಲೆಕ್ಕಾಚಾರದ ಸೂತ್ರವನ್ನು ನೀಡಲಾಗಿದೆ. ಇದು ದಿನಗೂಲಿ ಲೆಕ್ಕದಲ್ಲಿ ಕೆಲಸ ಮಾಡುವ ಕಾರ್ವಿುಕರಿಗೂ ಅನ್ವಯವಾಗಲಿದೆ.

ರಜಾ ದಿನಕ್ಕೆ ಎರಡು ಪಟ್ಟು ವೇತನ: ತುಂಡು ಆಧಾರದ ಮೇಲೆ 8 ಗಂಟೆ ಕೆಲಸ ಮಾಡುವ ಕಾರ್ವಿುಕರ ವೇತನವು ಅದೇ ಕೆಲಸ ಮಾಡುವ ಕಾರ್ವಿುಕರ ಒಂದು ದಿನದ ವೇತನದ ಕೆಲಸಕ್ಕಿಂತ ಕಡಿಮೆ ಇರಕೂಡದು. ಅಂತೆಯೇ, ವಾರದ ರಜಾ ದಿನ ಹಾಗೂ ಹಬ್ಬದ ದಿನಗಳಂದು ಕೆಲಸ ಮಾಡುವ ಕಾರ್ವಿುಕರಿಗೆ ಸಾಮಾನ್ಯ ವೇತನದ ಎರಡು ಪಟ್ಟು ವೇತನ ನೀಡತಕ್ಕದ್ದು. ದಿನದ ಅವಧಿಗಿಂತ ಹೆಚ್ಚು ಕೆಲಸ ಮಾಡಿದಲ್ಲಿ, ಅಂಥ ಹೆಚ್ಚುವರಿ ಅವಧಿ ಕೆಲಸಕ್ಕೆ ಆತನ ವೇತನದ ಎರಡು ಪಟ್ಟು ವೇತನ ಪಾವತಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಇನ್ನು, ಟ್ರೇನಿಗಳಿಗೆ ಆ ವರ್ಗದ ವೇತನದಾರರು ಪಡೆಯುತ್ತಿರುವ ಮೊತ್ತದ ಶೇ.75 ಸಂಬಳ ನೀಡಬೇಕು. ವೇತನವನ್ನು ಚೆಕ್ ಮೂಲಕ ಅಥವಾ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡತಕ್ಕದ್ದು.

ಸಮಾನ ವೇತನ: ಮಹಿಳೆಯರು, ಪುರುಷರು ಹಾಗೂ ತೃತೀಯ ಲಿಂಗಿಗಳು ಒಂದೇ ರೀತಿಯ ಕೆಲಸವನ್ನು ನಿರ್ವಹಿಸಿದ ಸಂದರ್ಭದಲ್ಲಿ ಎಲ್ಲರಿಗೂ ಸಮಾನ ದರದ ವೇತನ ಪಾವತಿಸತಕ್ಕದ್ದು. ಅಧಿಸೂಚನೆಯಲ್ಲಿ ಯಾವುದಾದರೂ ಕಾರ್ವಿುಕವರ್ಗ ವನ್ನು ನಮೂದಿಸದೇ ಇದ್ದಲ್ಲಿ, ಅದೇ ಸ್ವರೂಪದ ಕೆಲಸ ಮಾಡುತ್ತಿರುವ ಇತರ ಸಿಬ್ಬಂದಿಗೆ ನಿಗದಿಪಡಿಸಲಾದ ಮೊತ್ತವನ್ನೇ ನೀಡಬೇಕಾಗುತ್ತದೆ.


Spread the love

About Laxminews 24x7

Check Also

ಮಹಿಷ ದಸರಾ | ಯಾರಿಗೂ ತೊಂದರೆ ಆಗದಂತೆ ಮಾಡಿಕೊಳ್ಳಬಹುದು: ಮಹದೇವಪ್ಪ

Spread the love ಮೈಸೂರು: ‘ಯಾರಿಗೂ, ಯಾವ ತೊಂದರೆಯೂ ಆಗದಂತೆ ಯಾರು ಬೇಕಾದರೂ ಅವರವರ ಧಾರ್ಮಿಕ ಆಚರಣೆ ಮಾಡಿಕೊಳ್ಳಬಹುದು’ ಎಂದು ಜಿಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ